rump ರಂಪ್‍
ನಾಮವಾಚಕ
  1. (ಪ್ರಾಣಿಯ, ಹಕ್ಕಿಯ) ಹಿಂಭಾಗ; ಕುಂಡೆ; ಅಂಡು; ಪಿರ್ರೆ; ಪೃಷ್ಠ; ಬಾಲ ಹುಟ್ಟುವ ಭಾಗ.
  2. (ಶಾಸನಸಭೆ ಮೊದಲಾದವುಗಳ) ಅಲ್ಪಸಂಖ್ಯೆಯ ಕೊನೆಯುಳಿಕೆ ಸದಸ್ಯರು; ಕಡೆಗೆ ಉಳಿದ ಅಲ್ಪಸ್ವಲ್ಪ ಜನ ಯಾ ನಿಷ್ಟ ಭಾಗ; ಶೇಷಭಾಗ; ಅವಶೇಷ.
ಪದಗುಚ್ಛ

the Rump (ಚರಿತ್ರೆ) ಇಂಗ್ಲೆಂಡಿನ ದೀರ್ಘಾವಧಿಯ ಪಾರ್ಲಿಮೆಂಟಿನ ಪುನಸ್ಥಾಪನೆಯ (1659) ಅನಂತರದ ಯಾ ಕರ್ನಲ್‍ ಪ್ರೈಡ್‍ ನಡೆಸಿದ ಪಾರ್ಲಿಮೆಂಟಿನ ಶುದ್ಧೀಕರಣದಿಂದ ಅದು ಮೊದಲ ಬಾರಿಗೆ ವಿಸರ್ಜನೆಗೊಳ್ಳುವ ಕಾಲದವರೆಗೂ (1648-1653) ಇದ್ದ ಪಾರ್ಲಿಮೆಂಟಿನ ಶೇಷಭಾಗ.