See also 2rumour
1rumour ರೂಮರ್‍
ನಾಮವಾಚಕ
  1. ಬೀದಿಮಾತು; ಬೀದಿಸುದ್ದಿ; ಗುಲ್ಲು; ವದಂತಿ; ಜನವಾರ್ತೆ; ಸಂಶಯಗ್ರಸ್ತವಾದ – ಹೇಳಿಕೆ ಯಾ ಸುದ್ದಿ: a rumour of war ಯುದ್ಧದ ವದಂತಿ.
  2. ಗಾಳಿ – ಸಮಾಚಾರ, ವರ್ತಮಾನ; ಚಾಲ್ತಿಯಲ್ಲಿರುವ, ಗಾಳಿಯಲ್ಲಿರುವ, ಆದರೆ ಖಚಿತಪಡಿಸದ ಸುದ್ದಿ, ಹೇಳಿಕೆ, ವರ್ತಮಾನ: heard a rumour that you are leaving ನೀನು ಹೊರಡುತ್ತಿದ್ದೀಯೆ ಎಂಬ ಗಾಳಿವರ್ತಮಾನ ಕೇಳಿದೆ.
See also 1rumour
2rumour ರೂಮರ್‍
ಸಕರ್ಮಕ ಕ್ರಿಯಾಪದ

(ಮುಖ್ಯವಾಗಿ ಕರ್ಮಣಿಪ್ರಯೋಗ) ಸುದ್ದಿಹರಡು; ವದಂತಿ ಇರು: it is rumoured that the king is dead ದೊರೆ ಸತ್ತಿದ್ದಾನೆಂದು ಸುದ್ದಿ ಹರಡಿದೆ.