rugged ರಗಿಡ್‍
ಗುಣವಾಚಕ
  1. (ನೆಲ ಯಾ ಭೂಪ್ರದೇಶದ ವಿಷಯದಲ್ಲಿ) ಒರಟಾದ; ಒಡ್ಡೊಡ್ಡಾದ; ಏರುಪೇರುಗಳುಳ್ಳ; ಹಳ್ಳತಿಟ್ಟಾದ: rugged country ಕಗ್ಗಾಡು ಪ್ರದೇಶ; ಮೊರಡಿ ಪ್ರಾಂತ.
  2. (ಲಕ್ಷಣಗಳು, ರೂಪರೇಖೆ, ಆಕಾರಗಳ ವಿಷಯದಲ್ಲಿ)
    1. ಒಡ್ಡೊಡ್ಡಾದ; ಕೋಚುಕೋಚಾದ; ಅಸಮನಾದ.
    2. ಖಚಿತವಾದ; ವಿಸ್ಪಷ್ಟವಾದ.
  3. ಒಡ್ಡಾದ; ಒರಟಾದ; ನಯವಿಲ್ಲದ; ಮಾರ್ದವವಿಲ್ಲದ; ಅಪರಿಷ್ಕೃತ; ಅಸಂಸ್ಕೃತ: rugged manners ಒಡ್ಡುನಡತೆ. rugged grandeur ನಯನಾಜೂಕಿಲ್ಲದ ವೈಭವ.
  4. (ಧ್ವನಿಯ ವಿಷಯದಲ್ಲಿ) ಕರ್ಕಶ; ಬಿರುಸು; ಒರಟು: rugged verse ಕರ್ಕಶ ಪದ್ಯ.
  5. ನಿಷ್ಠುರ; ಕಟು; ಕಠೋರ: rugged individualist ನಿಷ್ಠುರ ವ್ಯಕ್ತಿಸ್ವಾತಂತ್ರ್ಯವಾದಿ.
  6. ಬಿರುಸಾದ; ಜಗ್ಗದ; ಮೊಂಡು; ಸಗ್ಗದ: rugged character ಜಗ್ಗದ ಸ್ವಭಾವ.
  7. ಕಷ್ಟದ; ಶ್ರಮದ; ಪ್ರಯಾಸದ: a rugged life ಕಷ್ಟದ ಬದುಕು.
  8. (ಮುಖ್ಯವಾಗಿ ಯಂತ್ರದ ವಿಷಯದಲ್ಲಿ) ಗಟ್ಟಿಮುಟ್ಟಾದ; ಕಟ್ಟುಮಸ್ತಾದ; ದೃಢವಾದ.