rudiment ರೂಡಿಮಂಟ್‍
ನಾಮವಾಚಕ
  1. (ಬಹುವಚನದಲ್ಲಿ) (ಯಾವುದೇ ವಿಷಯದ ಯಾ ಜ್ಞಾನಶಾಖೆಯ) ಮೂಲಪಾಠಗಳು ಯಾ ಮೂಲತತ್ವಗಳು; ಓನಾಮ; ಮೊತ್ತಮೊದಲ, ಆರಂಭದ ಪಾಠಗಳು.
  2. (ಬಹುವಚನದಲ್ಲಿ) (ಮುಂದೆ ಬೆಳೆಯುವ ಯಾ ಬೇರೆ ಸನ್ನಿವೇಶದಲ್ಲಿ ಬೆಳೆಯಬಹುದಾಗಿದ್ದ) ಬೀಜರೂಪ; ಮೂಲಾಂಕುರ; ಅಪೂರ್ಣ ಮೊದಲ ರೂಪ; ಮೂಲಾರಂಭ; ಆರಂಭಸ್ಥಿತಿ; ಪ್ರಾರಂಭಾವಸ್ಥೆ; ಅಪೂರ್ಣಾವಸ್ಥೆ; ಆದ್ಯವಸ್ಥೆ.
  3. ಅಂಕುರಾಂಗ; ಮೂಲಾಂಗ; ನಿಯತಕಾರ್ಯವಿಲ್ಲದ, ಪೂರ್ಣಾವಸ್ಥೆಗೆ ಬೆಳೆಯದೆ ಇರುವ, ಅಂಗ(ಭಾಗ) (ಉದಾಹರಣೆಗೆ) ಗಂಡಸಿನ ಮೊಲೆ.