rude ರೂಡ್‍
ಗುಣವಾಚಕ
  1. (ವ್ಯಕ್ತಿ, ಟೀಕೆ ಮೊದಲಾದವುಗಳ ವಿಷಯದಲ್ಲಿ) ಪ್ರಾತ; ಅಸಂಸ್ಕೃತ; ಅಸಭ್ಯ; ಅನಾಗರಿಕ: rude times ಅನಾಗರಿಕ ಕಾಲ.
  2. ಸಾದಾ; ಸರಳ.
  3. ಒರಟಾದ; ಒರಟೊರಟಾದ; ಒಡ್ಡೊಡ್ಡಾದ.
  4. ಕಚ್ಚಾ; ಸ್ವಾಭಾವಿಕ ಸ್ಥಿತಿಯಲ್ಲಿಯ; ಅಪರಿಷ್ಕೃತ: rude ore ಕಚ್ಚಾ ಅದುರು.
  5. ವಿದ್ಯೆಯಿಲ್ಲದ; ಮುಗ್ಧ; ಅಶಿಕ್ಷಿತ.
  6. ನಯನಾಜೂಕಿಲ್ಲದ ಸೂಕ್ಷ್ಮವಿಲ್ಲದ.
  7. ನಿಷ್ಕೃಷ್ಟವಲ್ಲದ; ಕರಾರುವಾಕ್ಕಲ್ಲದ; ನಿಖರವಲ್ಲದ; ಸ್ಥೂಲ: rude classification ಸ್ಥೂಲ ವರ್ಗೀಕರಣ.
  8. ಒರಟಾಗಿ ಮಾಡಿದ; ಒಡ್ಡೊಡ್ಡಾಗಿ ತಯಾರಿಸಿದ: rude plough ಒರಟಾಗಿ ಮಾಡಿದ ನೇಗಿಲು.
  9. ತೀವ್ರ; ತೀಕ್ಷ್ಣ; ಬಿರುಸಾದ; ಉಗ್ರ; ರಭಸದ; ಸಂಯಮವಿಲ್ಲದ.
  10. ಹಠಾತ್ತನೆಯ; ಗಾಬರಿ ಮಾಡುವ; ಥಟಕ್ಕನೆ ಸಂಭವಿಸಿದ: rude awakening ಹಠಾತ್ತನೆಯ ಜ್ಞಾನೋದಯ.
  11. ಹುರುಪಿನ; ಕಸುವುಳ್ಳ; ಜೋರಾದ; ಗಟ್ಟಿಮುಟ್ಟಾದ; ದೃಢ: rude health ದೃಢ ಆರೋಗ್ಯ.
  12. ಸೊಕ್ಕಿನ; ಅಹಂಕಾರದ; ಉದ್ಧತ; ಧಾರ್ಷ್ಟ್ಯದ; ಮನನೋಯಿಸುವ; ಅಪಮಾನಪಡಿಸುವ: rude remarks ಸೊಕ್ಕಿನ ಮಾತುಗಳು.
  13. ಹಲ್ಕಾ; ಅಶ್ಲೀಲ: a rude joke ಹಲ್ಕಾ ಜೋಕು, ಹಾಸ್ಯ.
  14. ಸ್ಥೂಲವಾದ; ಸರಿಸುಮಾರಾದ: a rude first calculation of costs ವೆಚ್ಚಗಳ ಸ್ಥೂಲವಾದ ಪ್ರಾಥಮಿಕ ಲೆಕ್ಕಾಚಾರ.
ಪದಗುಚ್ಛ
  1. be rude to
    1. ಅವಮಾನಗೊಳಿಸು.
    2. ಅವಿನಯದಿಂದ, ಮರ್ಯಾದೆ ತೋರದೆ – ಮಾತನಾಡು.
  2. say rude things ಮನನೋಯಿಸುವಂಥ ಮಾತುಗಳನ್ನಾಡು.