See also 2ruck  3ruck
1ruck ರಕ್‍
ನಾಮವಾಚಕ
  1. (ಓಟದ ಪಂದ್ಯದಲ್ಲಿ) ಹಿಂದೆ ಬಿದ್ದ ತಂಡ; ಮುಂದಿರುವವರನ್ನು ಹಿಂದಕ್ಕೆ ಹಾಕಲಾರದ ಸ್ಪರ್ಧಿಗಳ ಪ್ರಧಾನ ಭಾಗ, ತಂಡ, ಗುಂಪು.
  2. ಸಾಮಾನ್ಯ ಗುಂಪು ಯಾ ರಾಶಿ; ವಿಶೇಷ ಗುಣಗಳೇನೂ ಇಲ್ಲದ ಜನಜಂಗುಳಿ ಯಾ ವಸ್ತುಗಳ ರಾಶಿ.
  3. (ರಗ್ಬಿ ಹುಟ್‍ಬಾಲ್‍) ಚೆಂಡು ನೆಲದ ಮೇಲಿದ್ದು ಪ್ರತಿಯೊಂದು ತಂಡದ ಮುಂಚೂಣಿ ಆಟಗಾರರು ಕೈಗಳನ್ನು ಹಿಡಿದು ತಲೆಗಳನ್ನು ಕೆಳಗೆ ಮಾಡಿರುವ ನಿಲುವು.
  4. (ಆಸ್ಟ್ರೇಲಿಯನ್‍ ರೂಲ್ಸ್‍) (ರಗ್ಬಿ ಚೆಂಡಿನಿಂದ ಆಡುವ ಆಸ್ಟ್ರೇಲಿಯನ್‍ ಹುಟ್‍ಬಾಲ್‍ನಲ್ಲಿ) ಮೂವರ ತಂಡ; ಚಲಿಸುತ್ತಿರುವ ಮೂವರು ಆಟಗಾರರ ತಂಡ.
See also 1ruck  3ruck
2ruck ರಕ್‍
ನಾಮವಾಚಕ

ಸುಕ್ಕು ಯಾ ಮಡಿಕೆ.

See also 1ruck  2ruck
3ruck ರಕ್‍
ಸಕರ್ಮಕ ಕ್ರಿಯಾಪದ

ಸುಕ್ಕುಮಾಡು ಯಾ ಮಡಿಕೆಮಾಡು.

ಅಕರ್ಮಕ ಕ್ರಿಯಾಪದ

ಸುಕ್ಕಾಗು ಯಾ ಮಡಿಕೆಯಾಗು.