rubric ರೂಬ್ರಿಕ್‍
ನಾಮವಾಚಕ
    1. ಅಧ್ಯಾಯ ಶೀರ್ಷಿಕೆ; ಪ್ರಕರಣ ಶೀರ್ಷಿಕೆ; ಕೆಂಪುಮಸಿಯಲ್ಲಿ ಯಾ ವಿಶೇಷ ತೆರದ ಅಕ್ಷರಗಳಲ್ಲಿ ಬರೆದ ಯಾ ಮುದ್ರಿಸಿದ ಅಧ್ಯಾಯ, ಪ್ರಕರಣ ಮೊದಲಾದವುಗಳ ಶಿರೋನಾಮೆ.
    2. ಹೀಗೆ ಮುದ್ರಿಸಿದ ಸಾರವಾಕ್ಯ; ವಿಷಯಸಂಗ್ರಹ ವಾಕ್ಯ.
  1. ಚರ್ಚಿನ ಪೂಜಾವಿಧಿ ಪುಸ್ತಕಗಳಲ್ಲಿ ಆರಾಧನೆಯ ಕ್ರಮದ (ಸಾಮಾನ್ಯವಾಗಿ ಕೆಂಪಕ್ಷರದಲ್ಲಿರುವ) ಸೂಚನೆ; ಪೂಜಾವಿಧಾನ ಸೂಚನೆ.
  2. (ಈಗ ವಿರಳ ಪ್ರಯೋಗ) ಸಾಧುಸಂತರ ಪಟ್ಟಿ; ಸಾಧುಸಂತರ ಪಟ್ಟಿಯಲ್ಲಿ ಕೆಂಪಕ್ಷರದಲ್ಲಿ ಬರೆದಿರುವ ಸಂತನ ಹೆಸರು.
  3. ವಿವರಣಾತ್ಮಕ ಪದಗಳು, ಮಾತುಗಳು.
  4. ಶಿಷ್ಟಾಚಾರ; ಸತ್ಸಂಪ್ರದಾಯ; ವಾಡಿಕೆ; ಅಂಗೀತ ಪದ್ಧತಿ; ರೂಢಿ.