rubble ರಬ(ಬ್‍)ಲ್‍
ನಾಮವಾಚಕ
  1. (ಹಳೆಯ ಕಟ್ಟಡಗಳನ್ನು ಕೆಡವಿದಾಗ ಸಿಕ್ಕುವ) ಅವಶೇಷಗಳು; ಚೂರುಪಾರು; ಕಲ್ಲು, ಇಟ್ಟಿಗೆ ಮೊದಲಾದವುಗಳ ಒಡ್ಡೊಡ್ಡು ಹೆಂಟೆಗಳು, ಗುಂಡುಗಳು, ಚೂರುಗಳು.
  2. (ಮುಖ್ಯವಾಗಿ ಗೋಡೆ ಕಟ್ಟಡದಲ್ಲಿ ಭರ್ತಿಗಾಗಿ ತುಂಬುವ) ಒಡ್ಡೊಡ್ಡು ಕಲ್ಲುಗಳು; ಕಚ್ಚಾಕಲ್ಲು.
  3. (ಭೂವಿಜ್ಞಾನ) ಕೋಚು ಚಿಪ್ಪುಗಳು; ಕೆಲವು ಶಿಲೆಗಳನ್ನು ಮುಸುಕಿ ಕೊಂಡಿರುವ, ಬಂಡೆಗಳ ಹೊರಚಿಪ್ಪಾಗಿರುವ, ಭದ್ರವಾಗಿ ಅಂಟಿರದ ಯಾ ಎದ್ದು ಬರುವಂತಿರುವ ಕೋಚುಕೋಚಾದ ಕಲ್ಲಿನ ಹಲ್ಲೆಗಳು, ಚಕ್ಕೆಗಳು, ಚೂರುಗಳು.
  4. ನೀರಿನಿಂದ ಸವೆದ ಕಲ್ಲುಗಳು; ಜಲಸವೆತದ ಶಿಲೆಗಳು.