royalty ರಾಇಅಲ್ಟಿ
ನಾಮವಾಚಕ
(ಬಹುವಚನ royalties).
  1. ರಾಜಪದವಿ; ರಾಜಾಧಿಕಾರ; ರಾಜಶಕ್ತಿ; ರಾಜತ್ವ; ದೊರೆತನ; ಪ್ರಭುತ್ವ; ರಾಜನ ಯಾ ರಾಣಿಯ – ಪದವಿ, ಅಧಿಕಾರ ಯಾ ಘನತೆ.
  2. ರಾಜ ಯಾ ರಾಣಿ; ರಾಜವ್ಯಕ್ತಿಗಳು.
  3. ರಾಜವಂಶಜರು; ರಾಜಮನೆತನದವರು.
  4. (ಸಾಮಾನ್ಯವಾಗಿ ಬಹುವಚನದಲ್ಲಿ) ರಾಜಸವಲತ್ತುಗಳು; ರಾಜನ ವಿಶೇಷ ಹಕ್ಕುಗಳು; ರಾಜಾಧಿಕಾರಗಳು; ರಾಜಹಕ್ಕುಗಳು.
  5. ರಾಜಾಧಿಕಾರ; ರಾಜಸನ್ನದು; ರಾಜನು ವ್ಯಕ್ತಿಗಾಗಲಿ ಸಂಘಕ್ಕಾಗಲಿ ವಹಿಸಿಕೊಟ್ಟ (ಈಗ ಸಾಮಾನ್ಯವಾಗಿ ಖನಿಜಗಳ ಮೇಲಿನ) ಅಧಿಕಾರ.
  6. (ಚರಿತ್ರೆ) ಗಣಿಕೆಲಸದ ಗುತ್ತಿಗೆದಾರನು ಖನಿಜವಸ್ತುಗಳ ಅನುಭೋಗಕ್ಕಾಗಿ ನೆಲದ ಒಡೆಯನಿಗೆ ಕೊಡುವ ಮೊತ್ತ; ರಾಜಾದಾಯ; ರಾಜಭಾಗ.
  7. ಸ್ವಾಮ್ಯಭಾಗ; ರಾಯಧನ; ವ್ಯಾಪಾರ ಸ್ವಾಮ್ಯವನ್ನು ಉಪಯೋಗಿಸಿಕೊಳ್ಳುವುದಕ್ಕಾಗಿ ಆ ಸ್ವಾಮ್ಯದವನಿಗೆ ಯಾ ಪುಸ್ತಕಗಳನ್ನು ಮಾರಾಟಕ್ಕಾಗಿ ತೆಗೆದುಕೊಂಡು ಗ್ರಂಥಕರ್ತನಿಗೆ ಕೊಡುವ ಹಣ, ಧನ.