See also 2royal
1royal ರಾಇಅಲ್‍
ಗುಣವಾಚಕ
    1. ರಾಜನ (ಯಾ ರಾಣಿಯ); ದೊರೆಯ; ಅರಸನ.
    2. ರಾಜವಂಶದ.
    3. ರಾಜನಿಗೆ ಸಂಬಂಧಿಸಿದ.
    4. ರಾಜಯೋಗ್ಯ; ರಾಜೋಚಿತ.
  1. ರಾಜನ ಸೇವೆಯಲ್ಲಿರುವ; ರಾಜಾಶ್ರಯದಲ್ಲಿರುವ.
  2. (ರಾಜ) ವೈಭವದ; ಭವ್ಯ; ಗಂಭೀರ; ಘನವಾದ; ರಾಜಸಂಭ್ರಮದ: gave us royal entertainment ನಮಗೆ ರಾಜೋಪಚಾರ ಮಾಡಿದನು.
  3. ಉತ್ತಮ ದರ್ಜೆಯ; ಭರ್ಜರಿ; ಭಾರಿ ಪ್ರಮಾಣ, ಅಸಾಧಾರಣ ಗಾತ್ರ, ಗುಣ ಮೊದಲಾದವುಗಳುಳ್ಳ.
ಪದಗುಚ್ಛ
  1. a royal time ರಾಜವೈಭವದ ಕಾಲ.
  2. in royal spirits ರಾಜೋಲ್ಲಾಸದಲ್ಲಿ; ಬಹಳ ಹುಮ್ಮಸ್ಸಿನಲ್ಲಿ.
  3. Royal Air Force (ಸಂಕ್ಷಿಪ್ತ RAF) ಬ್ರಿಟನ್ನಿನ ಪ್ರಮುಖ ವಾಯುದಳ.
  4. Royal British Legion 1921 ರಲ್ಲಿ ಸ್ಥಾಪಿತವಾದ, ಮಾಜಿ ಸಶಸ್ತ್ರ ಸೈನಿಕರ ರಾಷ್ಟ್ರೀಯ ಸಂಘ.
  5. royal road to ರಾಜಮಾರ್ಗ; ತೊಂದರೆಯಿಲ್ಲದೆ ಯಾವುದನ್ನೇ ಸಾಧಿಸುವ ಮಾರ್ಗ.
See also 1royal
2royal ರಾಇಅಲ್‍
ನಾಮವಾಚಕ
  1. (ಆಡುಮಾತು) ರಾಜವಂಶದವನು(ಳು).
  2. ರಾಜಸಾರಂಗ; ಹನ್ನೆರಡು ಯಾ ಹೆಚ್ಚು ಕವಲುಗಳುಳ್ಳ ಕೊಂಬುಗಳಿರುವ ಗಂಡುಜಿಂಕೆ.
  3. ತುತ್ತತುದಿಯ ಹಾಯಿ ಯಾ ಕೂವೆ.
  4. ರಾಯಲ್‍; ಕಾಗದದ ಒಂದು ಅಳತೆ, ಸುಮಾರು $620 \times 500$ ಮಿಲಿಮೀಟರ್‍($25” \times 20”$).
ಪದಗುಚ್ಛ

the Royals ಬ್ರಿಟನ್ನಿನ ನೌಕಾಪಡೆ.