See also 2rowel
1rowel ರೌಅಲ್‍
ನಾಮವಾಚಕ
  1. ಮುಳ್ಳುಗಾಲಿ; ಮುಳ್ಳುಬಿಲ್ಲೆ; ಮರೇಂಜು; ಕುದುರೆ ಸವಾರನ ಹಿಮ್ಮಡಿಗೆ ಹಾಕುವ ಚುಚ್ಚು ಸಲಕರಣೆಯ ಕೊನೆಯಲ್ಲಿ ತೊಡಿಸುವ ಮೊಳೆಮೊನೆಗಳ ತಿರುಗುಬಿಲ್ಲೆ; ರಿಕಾಪಿನ ಮುಳ್ಳು ಚಕ್ರ.
  2. ಚಕ್ಕಳದ ತೂತುಬಿಲ್ಲೆ; ದೇಹರಸಗಳನ್ನು ಹೊರಹೊರಡಿಸುವುದಕ್ಕಾಗಿ ಕುದುರೆಯ ಚರ್ಮಕ್ಕೂ ಮಾಂಸಕ್ಕೂ ನಡುವೆ ಇಡುವ ರಂಧ್ರಕೊರೆದ ಚಕ್ಕಳದ ಬಿಲ್ಲೆ.
See also 1rowel
2rowel ರೌಅಲ್‍
ಸಕರ್ಮಕ ಕ್ರಿಯಾಪದ
[ಭೂತರೂಪ ಮತ್ತು ಭೂತಕೃದಂತ rowelled (ಅಮೆರಿಕನ್‍ ಪ್ರಯೋಗ roweled);
  1. ಮುಳ್ಳು ಬಿಲ್ಲೆಯಿಂದ ಕುದುರೆಯನ್ನು ಚುಚ್ಚು, ತಿವಿ.
  2. ಚಕ್ಕಳದ ಬಿಲ್ಲೆ ಇಡು, ಒಳಸೇರಿಸು.