rouser ರೌಸರ್‍
ನಾಮವಾಚಕ
  1. (ಬೇಟೆಯನ್ನು ಅದರ ಇಕ್ಕೆಯಿಂದ, ಮರಸಿನಿಂದ) ಹೊರಹೊರಡಿಸುವಂಥದು ಯಾ ಹೊರಹೊರಡಿಸುವವನು, ಎಬ್ಬಿಸುವವನು ಯಾ ಎಬ್ಬಿಸುವಂಥದು.
  2. (ನಿದ್ರೆ, ಆಲಸ್ಯ ಮೊದಲಾದವುಗಳಿಂದ) ಎಬ್ಬಿಸುವವನು; ಎಚ್ಚರಿಸುವವನು; ಎಚ್ಚರಿಗ; ಉತ್ತೇಜನಕಾರ; ಹುರಿದುಂಬಿಸುವವನು ಯಾ ಹುರಿದುಂಬಿಸುವಂಥದು.
  3. ಕೆರಳಿಸುವವನು ಯಾ ಕೆರಳಿಸುವಂಥದ್ದು; ಕೆರಳಿಗ; ಉದ್ರೇಕಗಾರ.
  4. (ಭಾವನೆಗಳನ್ನು) ಎಬ್ಬಿಸುವವನು ಯಾ ಎಬ್ಬಿಸುವಂಥದು.
  5. ಬಿಯರ್‍ ಮದ್ಯವನ್ನು ತೊಳಸುವ ಸಲಕರಣೆ, ಸೌಟು.
  6. ವಿಪರೀತ ಸುಳ್ಳು; ಮಿತಿಮೀರಿದ ಸುಳ್ಳು; ಪಕ್ಕಾ ಸುಳ್ಳು; ಡೋಂಗಿ; ಉದ್ರೇಕಗೊಳಿಸುವ ಸುಳ್ಳು.