See also 2roundabout
1roundabout ರೌಂಡಬೌಟ್‍
ನಾಮವಾಚಕ
  1. (ಬ್ರಿಟಿಷ್‍ ಪ್ರಯೋಗ)
    1. ಬಳಸುದಾರಿ; ಸುತ್ತುಹಾದಿ.
    2. ವಾಹನಗಳೆಲ್ಲವೂ ಮಧ್ಯದಲ್ಲಿರುವ ದ್ವೀಪದಂಥ ಜಾಗವನ್ನು ಸುತ್ತಿಕೊಂಡು ಒಮ್ಮುಖವಾಗಿ ಚಲಿಸಬೇಕಾದ ರಸ್ತೆಸಂಗಮದ ಜಾಗ, ಸ್ಥಳ; ಒಮ್ಮುಖ ಚಲನೆಯ ಮಾರ್ಗ ಯಾ ರಸ್ತೆಸಂಗಮಸ್ಥಾನ; ಚಲಿಸುವ ವಾಹನ, ಜನ ಎಲ್ಲ ಸುತ್ತಿಕೊಂಡು ಹೋಗಬೇಕಾದ ಸ್ಥಳ.
  2. ಬಳಸುಮಾತು.
  3. (ಬ್ರಿಟಿಷ್‍ ಪ್ರಯೋಗ) ರಂಕರಾಟಣ; ಸಂತೆ, ಜಾತ್ರೆ, ಮೊದಲಾದ ಕಡೆಗಳಲ್ಲಿ ದೊಡ್ಡ ಚಕ್ರವೊಂದಕ್ಕೆ ತಗುಲಿಸಿದ ಮರದ ಕುದುರೆ ಯಾ ತೊಟ್ಟಿಲುಗಳಲ್ಲಿ ಕುಳಿತು ಸುತ್ತಲು ರಾಟಣೆಯನ್ನು ಅಳವಡಿಸಿರುವ ಸಾಧನ.
ಪದಗುಚ್ಛ

lose on the swings what you make on the roundabouts ಕಷ್ಟಸುಖಗಳೆಲ್ಲಾ ಮುಗಿದಮೇಲೆ ಮೊದಲಿದ್ದ ಸ್ಥಿತಿಯಲ್ಲೇ ಇರು; ಲಾಭನಷ್ಟಗಳನ್ನು ಸರಿತೂಗಿಸಿ ಇದ್ದ ಸ್ಥಿತಿಯಲ್ಲೇ ಇರು; ಒಂದು ಕೈಗೆ ಬಂದದ್ದನ್ನು ಇನ್ನೊಂದು ಕೈಯಲ್ಲಿ ಕಳೆದುಕೊ.

See also 1roundabout
2roundabout ರೌಂಡಬೌಟ್‍
ಗುಣವಾಚಕ
  1. ಸುತ್ತು ಮಾರ್ಗದ; ಸಂಚಾರದ ವಾಹನ, ಜನ ಸುತ್ತುಮಾರ್ಗದಲ್ಲಿ ಹೋಗಬೇಕಾಗಿರುವ.
  2. ಸುತ್ತಿನ; ಬಳಸಾದ; ಬಳಸುದಾರಿಯ.
  3. ಬಳಸುಮಾತಿನ; ನೇರವಲ್ಲದ; ಜಾರುಮಾತಿನ.
  4. ದುಂಡುದುಂಡಾಗಿರುವ; ದಪ್ಪನಾದ; ಮಜಬೂತಾದ; ಠೊಣಪನಾದ.