roulette ರೂಲೆಟ್‍
ನಾಮವಾಚಕ
  1. ರೂಲೆಟ್‍ (ಆಟ); ಸಂಖ್ಯೆ ಹಾಕಿದ ಅಂಕಣಗಳುಳ್ಳ ಮೇಜಿನ ಮೇಲೆ ಸುತ್ತುತ್ತಿರುವ ಚಕ್ರದ ಮೇಲೆ ಚೆಂಡನ್ನು ಬೀಳಿಸಿ, ಆ ಚೆಂಡು ಯಾವ ಸಂಖ್ಯೆಯ ಮೇಲೆ ನಿಂತುಕೊಳ್ಳುತ್ತದೆ ಎನ್ನುವುದರ ಮೇಲೆ ಬಾಜಿ ಕಟ್ಟುವ ಒಂದು ಬಗೆಯ ಜೂಜಾಟ.
  2. (ಗಣಿತ) ರೂಲೆಟ್‍; ವಕ್ರವೊಂದರ ಮೇಲೆ ಇನ್ನೊಂದು ವಕ್ರ ಉರುಳುವಾಗ ಎರಡನೆಯ ವಕ್ರದ ಮೇಲಿನ ಬಿಂದು ರಚಿಸುವ ವಕ್ರ.
  3. ಗುಂಗುರುಕ; ಕುರುಳು ಸಾಧನ; ಕೂದಲನ್ನು ಗುಂಗುರು ಗುಂಗುರಾಗಿಡುವ ಸಾಧನ.
    1. (ಚಿತ್ರ ಕೊರೆಯುವ ಕೆಲಸದಲ್ಲಿ ಉಪಯೋಗಿಸುವ) ಉರುಳು ಹಲ್ಲುಚಕ್ರ.
    2. (ಅಂಚೆಚೀಟಿಗಳಲ್ಲಿ ಸಾಲುತೂತು ಕೊರೆಯಲು ಉಪಯೋಗಿಸುವ ಅಂಥದೇ) ಉರುಳು ಹಲ್ಲುಚಕ್ರ.