rostrum ರಾಸ್ಟ್ರಂ
ನಾಮವಾಚಕ
(ಬಹುವಚನ rostrums ಯಾ rostra ಉಚ್ಚಾರಣೆ ರಾಸ್ಟ್ರ).
  1. ವೇದಿಕೆ:
    1. ಉಪನ್ಯಾಸ ವೇದಿಕೆ; ಸಾರ್ವಜನಿಕ ಭಾಷಣದ ವೇದಿಕೆ (ಮೊದಲು ರೋಮ್‍ ನಗರದ ಸಾರ್ವಜನಿಕ ಸಭಾಸ್ಥಾನದಲ್ಲಿದ್ದ, ಗೆದ್ದು ತಂದ ಹುಟ್ಟು ಹಡಗುಗಳ ಮೂತಿಗಳಿಂದ ಅಲಂಕರಿಸುತ್ತಿದ್ದ ವೇದಿಕೆ).
    2. ಸಾರ್ವಜನಿಕರು ತನ್ನ ಮಾತಿಗೆ ಕಿವಿಗೊಡುವಂತೆ ಅನುಕೂಲಿಸುವ ಉಪದೇಶ ವೇದಿಕೆ, ಸ್ಥಾನ, ಪದವಿ ಮೊದಲಾದವು: auctioneer’s rostrum ಹರಾಜುಗಾರನ ವೇದಿಕೆ.
    3. (ವಾದ್ಯಂದ ಎದುರಾಗಿರುವ) ವಾದ್ಯ ನಿರ್ದೇಶಕನ ವೇದಿಕೆ, ಪೀಠ.
    4. ಇತರ ಉದ್ದೇಶಗಳಿಗಾಗಿ ಇರುವ ಇಂಥದೇ ವೇದಿಕೆ, ಉದಾಹರಣೆಗೆ ಹಿಲ್ಮ್‍ ಯಾ ಟೆಲಿವಿಷನ್‍ ಕ್ಯಾಮರಾದ ವೇದಿಕೆ.
  2. (ರೋಮನ್‍ ಪ್ರಾಕ್ತನಶಾಸ್ತ್ರ) ಯುದ್ಧದ ಹುಟ್ಟು ಹಡಗಿನ ಮೂತಿ (ಬಹುವಚನ ಸಾಮಾನ್ಯವಾಗಿ rostra).
  3. (ಜೀವವಿಜ್ಞಾನ) ರಾಸ್ಟ್ರಮ್‍; (ಕೀಟ ಮೊದಲಾದವುಗಳ ವಿಷಯದಲ್ಲಿ) ಮೂತಿ ಯಾ ಕೊಕ್ಕಿನಂಥ ಚಾಚಿಕೆ.