See also 2rose  3rose  4rose
1rose ರೋಸ್‍
ನಾಮವಾಚಕ
    1. ಗುಲಾಬಿ ಗಿಡ.
    2. ಗುಲಾಬಿಹೂವು.
    3. ಗುಲಾಬಿಯನ್ನು ಹೋಲುವ ಯಾವುದೇ ಹೂಬಿಡುವ ಗಿಡ: Christmas rose ಕ್ರಿಸ್‍ಮಸ್‍ ಗುಲಾಬಿ.
  1. (ವಂಶಲಾಂಛನದಲ್ಲಿ ಯಾ ಅಲಂಕಾರದಲ್ಲಿ, ಮುಖ್ಯವಾಗಿ ಇಂಗ್ಲೆಂಡಿನ ರಾಷ್ಟ್ರೀಯ ಲಾಂಛನವಾಗಿ) ಗುಲಾಬಿ ಗುರುತು, ಚಿಹ್ನೆ.
  2. ಗುಲಾಬಿಯ ಆತಿ, ಮಾದರಿ, ಮಾಟ.
  3. (ಪಾದರಕ್ಷೆಯ ಮೇಲೆ ಯಾ ಪಾದ್ರಿಯ ಟೊಪ್ಪಿಗೆಯ ಮೇಲೆ ಹಾಕುವ) ಗುಲಾಬಿಯಾತಿಯ ಅಲಂಕಾರ.
  4. (ಪ್ರಾಣಿಯ) ಕೊಂಬಿನ ಬುಡದಲ್ಲಿ ಯಾ (ಕೆಲವು ಹಕ್ಕಿಗಳ) ಕಣ್ಣಿನ ಸುತ್ತ ಇರುವ ಉಬ್ಬು, ಗುಬಟು.
  5. (ಸಸ್ಯಗಳಿಗೆ ನೀರು ಹೊಯ್ಯುವ) ಕೈತೊಟ್ಟಿಯ ಯಾ ನೀರ್ಕೊಳವಿಯ ಸೇಚಕ, ಸೂಸುಬಾಯಿ; ಸಿಂಪರಣೆ ಮಾಡುವ ಸೂಸುಬಾಯಿ.
  6. ತಿಳಿ ಕಡುಗೆಂಪು(ಬಣ್ಣ); ಪಾಟಲ ವರ್ಣ; ಗುಲಾಬಿ ಬಣ್ಣ.
  7. (ಸಾಮಾನ್ಯವಾಗಿ ಬಹುವಚನದಲ್ಲಿ) ಕೆಂಪು ಮುಖವರ್ಣ; ಗುಲಾಬಿರಂಗು: has quite lost her roses ಅವಳ ಮುಖದ ಗುಲಾಬಿರಂಗನ್ನು ಪೂರ್ತಿಯಾಗಿ ಕಳೆದುಕೊಂಡಿದ್ದಾಳೆ.
  8. ಸೀಲಿಂಗ್‍ ರೋಸ್‍; ಚಾವಣಿ ಗುಲಾಬಿ; ವಿದ್ಯುತ್ತಂತಿಯನ್ನು ತೂರಿಸಿರುವ, ಸೂರಿನಲ್ಲಿ ಹಾಕುವ, ತ್ತಾಕಾರದ, ಪ್ಲಾಸ್ಟಿಕ್ಕಿನ ಸಾಧನ.
  9. = rose diamond.
  10. = rose-window.
  11. (ಬಹುವಚನದಲ್ಲಿ) ಅನುಕೂಲಕರ ಪರಿಸ್ಥಿತಿಗಳು, ಯಶಸ್ಸು (ಮೊದಲಾದವನ್ನು ಸೂಚಿಸುವ ಪದಗುಚ್ಛಗಳಲ್ಲಿ ಪ್ರಯೋಗ): roses all the way ಸಂಪೂರ್ಣ ಯಶಸ್ಸು; ಉದ್ದಕ್ಕೂ ಅನುಕೂಲ.
  12. ಸೊಗಸಾದ, ಸುಂದರವಾದ–ವ್ಯಕ್ತಿ ಯಾ ವಸ್ತು, ಮುಖ್ಯವಾಗಿ ಸುಂದರ ಹೆಂಗಸು: English rose ಇಂಗ್ಲಿಷ್‍ ಸುಂದರಿ. not the rose but near ಅತ್ಯಂತ ಸುಂದರಿಯಲ್ಲ, ಆದರೆ ಅದರ ಹತ್ತಿರ ಇದ್ದಾಳೆ.
  13. (ರೂಪಕವಾಗಿ) ಸುಖಸ್ಥಿತಿ; ನೆಮ್ಮದಿಯ ಸ್ಥಿತಿ; ಹಿತವಾದ ಸ್ಥಿತಿ: life is not all roses ಜೀವನಪೂರ್ತಿ ಸುಖಸ್ಥಿತಿಯಲ್ಲ.
ಪದಗುಚ್ಛ
  1. attar of roses ಗುಲಾಬಿ ಅತ್ತರು.
  2. bed of roses ಗುಲಾಬಿ ಹಾಸಿಗೆ; ಸುಖಶಯ್ಯೆ; ಸುಖವಾದ ಮತ್ತು ಸುಲಭವಾದ ಕೆಲಸ, ಸ್ಥಾನ ಯಾ ಸ್ಥಿತಿ: is no bed of roses ಗುಲಾಬಿ ಹಾಸಿಗೆಯಲ್ಲ.
  3. crumpled rose leaf (ಸುಖವನ್ನು, ಆನಂದವನ್ನು, ನೆಮ್ಮದಿಯನ್ನು ಕೆಡಿಸುವಂಥ) ಸಣ್ಣ ಕಿರುಕುಳ ಯಾ ಕ್ಲೇಶ.
  4. gather roses ಭೋಗ ಬಯಸು; ಭೋಗವನ್ನು ಹುಡುಕಿಕೊಂಡು ಹೋಗು; ಭೋಗ ಅರಸು; ಸುಖ ಅಪೇಕ್ಷಿಸು.
  5. golden roses ಹೊಂಗುಲಾಬಿ; ‘ಲೆಂಟ್‍’ ಪರ್ವದ (ಅತುವಿನ)4ನೆಯ ಭಾನುವಾರ ಪೋಪ್‍ ಗುರು ಹರಸಿ, ರೋಮನ್‍ ಕ್ಯಾಥೊಲಿಕ್‍ ಮತದ ದೊರೆಗೆ ಯಾ ಪಟ್ಟಣ ಮೊದಲಾದವಕ್ಕೆ ಅಭಿನಂದನಾರ್ಥವಾಗಿ ಕಳುಹಿಸಿಕೊಟ್ಟ ಆಭರಣ.
  6. path strewn with roses ಸುಖ ಜೀವನ; ಆನಂದ ಜೀವನ.
  7. rose of Jericho ಅನಸ್ಚಾಟಿಕ ಹೈರೋಚುಂಟಿಕ ಕುಲದ, ಒಣಗಿದ್ದಾಗ ಮುದುರಿಕೊಂಡಿದ್ದು, ತೇವದಲ್ಲಿ ಹಿಗ್ಗುವ ಒಂದು ಬಗೆಯ ಗಿಡ.
  8. rose of Sharon
    1. ದಟ್ಟವಾದ ಎಲೆಗುಂಪಲೂ ಹೊನ್ನಹಳದಿ ಬಣ್ಣದ ಹೂಗಳೂ ಉಳ್ಳ, ಒಂದು ಬಗೆಯ ಹೈಪರಿಕಂ ಗಿಡ.
    2. (ಕ್ರೈಸ್ತಧರ್ಮ) ಗುರುತು ತಿಳಿಯದ ಒಂದು ಬಗೆಯ ಹೂಬಿಡುವ ಗಿಡ.
  9. rose without a thorn ಮುಳ್ಳಿಲ್ಲದ ಗುಲಾಬಿ; ದುಃಖ ಮಿಶ್ರವಲ್ಲದ ಆನಂದ; ಪರಿಶುದ್ಧ ಸುಖ; ನಿರುಪದ್ರವ ಆನಂದ; ಸಾಧ್ಯವಲ್ಲದ ಸುಖ.
  10. the rose ಒಂದು ಬಗೆಯ ದದ್ದು ರೋಗ; ಇಸುಬು; ವಿಸರ್ಪಿ.
  11. the white rose of virginity, innocence ಕೌಮಾರ್ಯದ, ನಿಷ್ಕಳಂಕತೆಯ, ಮುಗ್ಧತೆಯ ಪರಿಶುದ್ಧ ಮಾದರಿ, ಆದರ್ಶ.
  12. Wars of the Roses (ಚರಿತ್ರೆ) ಬಿಳಿಗುಲಾಬಿ ಲಾಂಛನದ ಯಾರ್ಕ್‍ ಮನೆತನದವರಿಗೂ ಕೆಂಪು ಗುಲಾಬಿ ಲಾಂಛನದ ಲ್ಯಾಂಕಸ್ಟರ್‍ ಮನೆತನದವರಿಗೂ 15ನೆಯ ಶತಮಾನದಲ್ಲಿ ನಡೆದ ಇಂಗ್ಲೆಂಡಿನ ಒಳಯುದ್ಧಗಳು; ಗುಲಾಬಿ ಲಾಂಛನವುಳ್ಳ ರಾಜಮನೆತನಗಳ ಅಂತರ್ಯುದ್ಧಗಳು.
  13. under the ಗೋಪ್ಯವಾಗಿ; ಗುಟ್ಟಾಗಿ; ಗುಪ್ತವಾಗಿ; ರಹಸ್ಯದಲ್ಲಿ: the conspiracy was hatched under the rose ಪಿತೂರಿಯನ್ನು ಗೋಪ್ಯವಾಗಿ ಹೂಡಲಾಯಿತು.
See also 1rose  3rose  4rose
2rose ರೋಸ್‍
ಗುಣವಾಚಕ
  1. ಗುಲಾಬಿ ಬಣ್ಣದ; ಗಾಢವಾದ ಪಾಟಲವರ್ಣದ.
  2. ಗುಲಾಬಿಯುಳ್ಳ; ಗುಲಾಬಿ ಬೆಳೆಯುವ.
  3. ಗುಲಾಬಿ ವಾಸನೆಯ.
See also 1rose  2rose  4rose
3rose ರೋಸ್‍
ಸಕರ್ಮಕ ಕ್ರಿಯಾಪದ
  1. (ಮುಖ್ಯವಾಗಿ ಭೂತಕೃದಂತದಲ್ಲಿ ಪ್ರಯೋಗ) (ಮುಖ, ನೀರ್ಗಲ್ಲ ಇಳುಕಲು ಮೊದಲಾದವನ್ನು) ಗುಲಾಬಿ ಬಣ್ಣ ಮಾಡು.
  2. ಗುಲಾಬಿ ವಾಸನೆ–ಕಟ್ಟು, ಹಾಕು, ಕೊಡು.
See also 1rose  2rose  3rose
4rose ರೋಸ್‍
ಕ್ರಿಯಾಪದ

rise ಕ್ರಿಯಾಪದದ ಭೂತರೂಪ.

rose ರೋಸೇ
ನಾಮವಾಚಕ
French

ಗುಲಾಬಿ ವೈನು; ಅಲ್ಪಕಾಲ ಕೆಂಪು ದ್ರಾಕ್ಷಿಯ ಸಿಪ್ಪೆಯ ಸಂಪರ್ಕದಲ್ಲಿಟ್ಟು ಬಣ್ಣ ಕೊಟ್ಟ, ತಿಳಿ ಎಳೆಗೆಂಪು ಬಣ್ಣದ ವೈನು.