See also 2roost  3roost
1roost ರೂಸ್ಟ್‍
ನಾಮವಾಚಕ
    1. ಹಕ್ಕಿ ಹಾರಿಬಂದು ಕುಳಿತುಕೊಳ್ಳುವ ಗಿಡದ ರೆಂಬೆ, ಅಡ್ಡಕಂಬಿ, ಕೂಡುಗಂಬಿ ಯಾ ಇತರ ಆಸರೆ.
    2. ಮುಖ್ಯವಾಗಿ ಹಕ್ಕಿಗಳು ನಿದ್ದೆಮಾಡಲು ನಿಯತವಾಗಿ ಬಳಸುವ, ಆಶ್ರಯಿಸುವ ಸ್ಥಳ.
    3. (ಮುಖ್ಯವಾಗಿ ಕೋಳಿಗಳು ಮಲಗುವ) ಕೋಳಿಗೂಡು; ಕೋಳಿ ಕೋಣೆ.
  1. (ರೂಪಕವಾಗಿ) ಮಲಗುವ ಕೋಣೆ, ಸ್ಥಳ; ಶಯನಾಗಾರ; ತಾತ್ಕಾಲಿಕವಾಗಿ ಮಲಗಲು ಅವಕಾಶ ಮಾಡಿಕೊಡುವ ಕೋಣೆ.
ಪದಗುಚ್ಛ
  1. at roost
    1. (ಹಕ್ಕಿ) ಕೂಡುಗಂಬಿಯ ಮೇಲೆ ವಿಶ್ರಮಿಸಿಕೊಳ್ಳುತ್ತ.
    2. (ಮನುಷ್ಯ) ಹಾಸಿಗೆಯಲ್ಲಿ ಮಲಗಿ.
  2. come home to roost (ಒಂದು ಕ್ರಿಯೆಯ ಪರಿಣಾಮ) ಮಾಡಿದವನಿಗೇ ಮರಳು, ತಟ್ಟು; ಮಾಡಿದವನ ಮೇಲೆಯೇ ತಿರುಗಿಬೀಳು; ಮಾಡಿದವನಿಗೇ ಹಾನಿಯುಂಟುಮಾಡು: curses come home to roost ಇಟ್ಟ ಶಾಪ ಕೊಟ್ಟವನಿಗೇ ತಟ್ಟುತ್ತದೆ; ಶಾಪ ಕೊಟ್ಟವನಿಗೇ ಹಾನಿಯಾಗುತ್ತದೆ.
  3. go to roost ರಾತ್ರಿ ಮಲಗಿಕೊಳ್ಳುವುದಕ್ಕೆ ಹೋಗು.
  4. rule the roost ಹತೋಟಿಯಲ್ಲಿಟ್ಟುಕೊಂಡಿರು; ಆಡಳಿತ ನಡಸು; ಅಧಿಕಾರ ಚಲಾಯಿಸು; ಪ್ರಬಲವಾಗಿರು: his wife rules the roost at home ಮನೆಯಲ್ಲಿ ಅವನ ಹೆಂಡತಿಯದೇ ರಾಜ್ಯಭಾರ, ಮೇಲುಗೈ.
See also 1roost  3roost
2roost ರೂಸ್ಟ್‍
ಸಕರ್ಮಕ ಕ್ರಿಯಾಪದ

(ಒಬ್ಬನಿಗೆ) ಮಲಗಲು ಸ್ಥಳಕೊಡು; ಮಲಗಲು ಜಾಗವೊದಗಿಸು.

ಅಕರ್ಮಕ ಕ್ರಿಯಾಪದ
  1. (ಹಕ್ಕಿ, ಮನುಷ್ಯ) ಮಲಗಿಕೊ; ಮಲಗಹೋಗು.
  2. (ಹಕ್ಕಿ) ಕೂಡುಗಂಬಿಯ ಮೇಲೆ ಕುಳಿತು ನಿದ್ರಿಸು.
  3. (ಮನುಷ್ಯ) ರಾತ್ರಿ (ಮಲಗಲು) ತಂಗಿರು; (ಒಂದು ಸ್ಥಳದಲ್ಲಿ) ರಾತ್ರಿ ಕಳೆ.
See also 1roost  2roost
3roost ರೂಸ್ಟ್‍
ನಾಮವಾಚಕ

(ಆರ್ಕ್ನಿ ಮತ್ತು ಷೆಟ್ಲೆಂಡ್‍ ದ್ವೀಪಗಳ ಸುತ್ತಮುತ್ತ ತಲೆದೋರುವ, ವಿರುದ್ಧ ಅಲೆಗಳ ಸಂಗಮದಿಂದ ಉಂಟಾಗುವ) ಉಬ್ಬರ (ಪ್ರವಾಹ).