See also 2room
1room ರೂಮ್‍
ನಾಮವಾಚಕ
  1. (ಯಾವುದೇ ವಸ್ತು ತೆಗೆದುಕೊಳ್ಳಬಹುದಾದ ಯಾವುದೇ ಹಿಡಿಸುವ ಯಾ ಯಾವುದರದೇ ಒಳಗೆ ಇರುವ) ಎಡೆ; ತೆರಪು; ಅವಕಾಶ; ಸ್ಥಳ; ಜಾಗ: there is plenty of room ಬೇಕಾದಷ್ಟು ಜಾಗವಿದೆ, ಸ್ಥಳವಿದೆ. shelf-room ಬಡು(ವಿನಲ್ಲಿನ) ಜಾಗ.
  2. ಅವಕಾಶ; ಆಸ್ಪದ; ಇಂಬು: no room for dispute ಜಗಳಕ್ಕೆ ಆಸ್ಪದವಿಲ್ಲ, ಅವಕಾಶವಿಲ್ಲ.
  3. ರೂಮು; ಕೋಣೆ; ಕೊಠಡಿ.
  4. (ಬಹುವಚನದಲ್ಲಿ) (ಒಬ್ಬ ಯಾ ಕುಟುಂಬ ಇರುವ) ವಾಸದ ಕೊಠಡಿಗಳು.
  5. ರೂಮಿನಲ್ಲಿನ ಜನ; ಕೋಣೆಯಲ್ಲಿ ಜೊತೆಯಲ್ಲಿರುವ ಜನ, ಸಂಗಾತಿಗಳು, ವ್ಯಕ್ತಿಗಳು: set the room in a roar ಕೋಣೆಯಲ್ಲಿದ್ದವರನ್ನೆಲ್ಲಾ ಅಬ್ಬರದಿಂದ ನಗುವಂತೆ ಮಾಡಿದನು.
  6. ( ಸಮಾಸ ಉತ್ತರ ಪದವಾಗಿ) ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಇರುವ ಕೊಠಡಿ ಯಾ ಸ್ಥಳ: auction-room ಹರಾಜು–ಕೋಣೆ, ಸ್ಥಳ.
ಪದಗುಚ್ಛ
  1. in one’s room (ಪ್ರಾಚೀನ ಪ್ರಯೋಗ) ಒಂದರ, ಒಬ್ಬನ ಸ್ಥಳದಲ್ಲಿ; ಒಬ್ಬನ ಯಾ ಒಂದರ ಪ್ರತಿಯಾಗಿ, ಬದಲು.
  2. in the room of (ಪ್ರಾಚೀನ ಪ್ರಯೋಗ) = ಪದಗುಚ್ಛ\((1)\).
  3. make room
    1. (ಇನ್ನೊಬ್ಬನಿಗಾಗಿ ಯಾ ಇನ್ನೊಂದಕ್ಕಾಗಿ) ಸ್ಥಳ, ಸ್ಥಾನ–ಬಿಟ್ಟುಕೊಡು.
    2. (ಮತ್ತೊಬ್ಬನಿಗೆ) ಅವಕಾಶ, ಜಾಗ, ಸ್ಥಳ ಮಾಡಿಕೊಡು.
    3. (ಇತರರನ್ನು ಬೇರೆ ಕಡೆಗೆ ಕಳುಹಿಸಿ) ಸ್ಥಳ ಮಾಡು; ಎಡೆಮಾಡು.
  4. no room for idlers ಸೋಮಾರಿಗಳಿಗೆ ಸ್ಥಳವಿಲ್ಲ, ಅವಕಾಶವಿಲ್ಲ.
  5. no (or not) room to swing a cat ಕಾಲಾಡಿಸುವುದಕ್ಕೂ ಸ್ಥಳವಿಲ್ಲ.
  6. room for (ಪ್ರಾಚೀನ ಪ್ರಯೋಗ) (ಆಜ್ಞೆ) (ಯಾರಾದರೂ ಒಬ್ಬರಿಗೆ) ಸ್ಥಳಬಿಡು; ಜಾಗಕೊಡು.
  7. there is room for improvement ಅಷ್ಟು ಸಮರ್ಪಕವಾಗಿಲ್ಲ; ಇನ್ನೂ ಉತ್ತಮವಾಗಲು ಅವಕಾಶವಿದೆ.
  8. would rather have his room than his company ಅವನು ದೂರ ಇದ್ದರೆ ಮೇಲು; ಅವನು ಇಲ್ಲಿರದಿದ್ದರೆ ಮೇಲು; ಅವನು ತೊಲಗಿಹೋದರೆ ಸಾಕು; ಅವನ ಜೊತೆಗಿಂತ, ಸಹವಾಸಕ್ಕಿಂತ ಅವನ ಕೊಠಡಿ ಸಿಕ್ಕಿದರೆ ಮೇಲು.
See also 1room
2room ರೂಮ್‍
ಅಕರ್ಮಕ ಕ್ರಿಯಾಪದ

(ಅಮೆರಿಕನ್‍ ಪ್ರಯೋಗ) ಕೋಣೆಯಲ್ಲಿರು; ಕೋಣೆಯಲ್ಲಿ ವಾಸಮಾಡು, ವಸತಿ ಮಾಡಿಕೊಂಡಿರು: students room together in the dormitory ವಿದ್ಯಾರ್ಥಿಗಳು ನಿದ್ದೆಕೊಠಡಿಯಲ್ಲಿ ಒಟ್ಟಿಗೆ ವಸತಿ ಮಾಡಿಕೊಂಡಿದ್ದಾರೆ.