See also 2romantic
1romantic ರೋಮ್ಯಾಂಟಿಕ್‍
ಗುಣವಾಚಕ
  1. ರೋಮ್ಯಾಂಟಿಕ್‍:
    1. ವಾಸ್ತವ ಸ್ಥಿತಿ ಯಾ ಬದುಕನ್ನು ಕುರಿತು ಆದರ್ಶೀಕರಿಸಿದ, ಭಾವಾತಿರೇಕದ ಯಾ ವಿಲಕ್ಷಣವಾದ ದೃಷ್ಟಿಯುಳ; ಅನುಭವಕ್ಕೆ ದೂರವಾದ: a romantic picture ಆದರ್ಶೀಕರಿಸಿದ ಚಿತ್ರ. a romanitc setting ವಸ್ತುಸ್ಥಿತಿಗೆ ದೂರವಾದ ಸನ್ನಿವೇಶ, ಪರಿಸರ.
    2. (Romantic ಸಹ) ಅದ್ಭುತ ಘಟನೆ, ಸಾಹಸ ಪ್ರಣಯ ಮೊದಲಾದವನ್ನು ವಿವರಿಸುವ; ಅದ್ಭುತ, ಸಾಹಸ ಕಥೆಯ ಅಂಶಗಳು ಯಾ ಲಕ್ಷಣಗಳುಳ್ಳ; ರೋಮಾಂಚಕಾರಿ: a romantic story ಅದ್ಭುತ ಘಟನೆಗಳನ್ನು, ಸಾಹಸ ಪ್ರಣಯವನ್ನು ಬಣ್ಣಿಸುವ ಕಥೆ; ರೋಮ್ಯಾಂಟಿಕ್‍ ಕಥೆ.
    3. (ವ್ಯಕ್ತಿಯ ವಿಷಯದಲ್ಲಿ) ಕಲ್ಪನಾಶೀಲ; ಭಾವನಾರಾಜ್ಯದ; ಕಲ್ಪನಾ ಪ್ರಪಂಚದ ಯಾ ಆದರ್ಶವಾದದ: a romantic girl ಕಲ್ಪನಾಶೀಲ ಹುಡುಗಿ.
    4. ಪ್ರಣಯ ಪ್ರವೃತ್ತಿಯ; ಪ್ರೇಮವನ್ನು ಸೂಚಿಸುವ: a romantic woman ಪ್ರಣಯ ಪ್ರವೃತ್ತಿಯ; ಸ್ತ್ರೀ; ರೊಮ್ಯಾಂಟಿಕ್‍ ಹೆಂಗಸು. romantic words ಪ್ರೇಮಸೂಚಕ–ಮಾತುಗಳು.
    5. (ಕಲೆ, ಸಂಗೀತ ಮೊದಲಾದವುಗಳ ವಿಷಯದಲ್ಲಿ) (ರೂಪಾಕೃತಿಗಿಂತ) ಭಾವಪ್ರಧಾನವಾದ; ಭಾವನಾಪೂರ್ಣ; ಭಾವೋದ್ರೇಕಗೊಳಿಸುವ; ಭಾವೋದ್ದೀಪ್ತ.
    6. (ಯೋಜನೆ ಮೊದಲಾದವುಗಳ ವಿಷಯದಲ್ಲಿ) ವಿಚಿತ್ರವಾದ; ಅವ್ಯಾವಹಾರಿಕ; ಕಾರ್ಯಾತ್ಮಕವಲ್ಲದ; ಕಾರ್ಯರೂಪಕ್ಕೆ ಬಾರದ.
    7. (ಸಾಹಿತ್ಯ, ಕಲೆ ಮೊದಲಾದವುಗಳ ವಿಷಯದಲ್ಲಿ) ರಮ್ಯ; ಒಪ್ಪ, ಪರಿಷ್ಕಾರ, ಸಮಂಜಸ ಪ್ರಮಾಣ ಮೊದಲಾದವಕ್ಕಿಂತ–ವೈಭವ, ರಮ್ಯತೆ, ಭಾವಾವೇಶ ಮೊದಲಾದವಕ್ಕೆ ಪ್ರಾಶಸ್ತ್ಯ ಕೊಡುವ.
  2. (Romantic ಸಹ) ರೊಮ್ಯಾಂಟಿಕ್‍; ರಮ್ಯ; 18-19ನೆಯ ಶತಮಾನಗಳಲ್ಲಿ ಯೂರೋಪಿನ ಸಾಹಿತ್ಯಕಲೆಗಳಲ್ಲಿನ ರೊಮ್ಯಾಂಟಿಕ್‍ ಚಳುವಳಿಯ ಯಾ ಶೈಲಿಯ.
See also 1romantic
2romantic ರೋಮ್ಯಾಂಟಿಕ್‍
ನಾಮವಾಚಕ
  1. (ಸಾಹಿತ್ಯ, ಕಲೆ ಮೊದಲಾದವುಗಳ ವಿಷಯದಲ್ಲಿ) ರೋಮ್ಯಾಂಟಿಕ್‍ ಪಂಥದವನು; ರಮ್ಯತಾವಾದಿ; ಭಾವನಾ ಸ್ವಾತಂತ್ರ್ಯ, ಸ್ವಚ್ಛಂದತೆ ಮೊದಲಾದವುಗಳ ಪಂಥದವನು.
  2. ರೋಮ್ಯಾಂಟಿಕ್‍ (ಸ್ವಭಾವದ, ದೃಷ್ಟಿಯ, ಭಾವನೆಯ, ಪ್ರವೃತ್ತಿಯ) ವ್ಯಕ್ತಿ.