roller ರೋಲರ್‍
ನಾಮವಾಚಕ
  1. ರೋಲರು:
    1. ಉರುಳಿಸುವ, ಹೊರಳಿಸುವ ಯಾ ಸುರುಳಿಸುತ್ತುವ ಸಾಧನ ಯಾ ವ್ಯಕ್ತಿ.
    2. (ನೆಲವನ್ನು ನಯಮಾಡುವುದು, ಒತ್ತುವುದು, ಮುದ್ರೆಯೊತ್ತುವುದು, ಜಜ್ಜುವುದು, ಮುದ್ರಣದ ಶಾಯಿಯನ್ನು ಹರಡುವುದು ಮೊದಲಾದ ಕೆಲಸಗಳಿಗೆ ಪ್ರತ್ಯೇಕವಾಗಿ ಯಾ ಯಂತ್ರದ ಒಂದು ತಿರುಗುವ ಭಾಗವಾಗಿ ಉಪಯೋಗಿಸುವ ವಿವಿಧ ಪ್ರಮಾಣದ) ಉರುಳೆ; ಲಟ್ಟಣಿಗೆ.
  2. ರೋಲರು; ಭಾರವಾದ ವಸ್ತುವನ್ನು ಸಾಗಿಸುವಾಗ ಘರ್ಷಣೆಯನ್ನು ತಗ್ಗಿಸಲು ಬಳಸುವ ಉರುಳೆ.
  3. ಬ್ಯಾಂಡೇಜು ಸುರುಳಿ; (ಶಸ್ತ್ರಚಿಕಿತ್ಸೆಯಲ್ಲಿ ಉಪಯೋಗಿಸಲು ಅನುಕೂಲಿಸುವಂತೆ ಅಡಕವಾಗಿ ಸುತ್ತಿದ) ಗಾಯ ಪಟ್ಟಿಯ ಸುರುಳಿ; ಗಾಯಕಟ್ಟು ಸುರುಳಿ.
  4. ಒಂದು ಬಗೆಯ ಪಾರಿವಾಳ.
  5. ನಿಡಿಯುಬ್ಬು ಅಲೆ; ಹೊರಳುತೆರೆ.
  6. ಕಾಗೆ ಜಾತಿಯ ಹಲವು ಹೊಳಪು ಬಾಲದ ಹಕ್ಕಿ; ಜರ್ಮನ್‍ ತಳಿಯ ‘ಕನೇರಿ’ ಹಕ್ಕಿ.
  7. ತಲೆಗೂದಲನ್ನು ಒಂದು ಶೈಲಿಯಲ್ಲಿ ಸುತ್ತಿಡಲು ಬಳಸುವ ಸಣ್ಣ ಉರುಳೆ.