See also 2rogue
1rogue ರೋಗ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಮೈಗಳ್ಳ ಅಲೆಮಾರಿ; ಮೈಗಳ್ಳನಾಗಿ ಬೀದಿ ಅಲೆಯುವವನು.
  2. ವಂಚಕ; ದಗಾಕೋರ; ಠಕ್ಕ; ಪಟಿಂಗ.
  3. (ಹಾಸ್ಯ ಪ್ರಯೋಗ) ಪುಂಡ; ತುಂಟ; ಕುಚೋದ್ಯಸ್ವಭಾವದ ಮನುಷ್ಯನ, ಮುಖ್ಯವಾಗಿ ಮಗುವಿನ, ವಿಷಯದಲ್ಲಿ ತಮಾಷೆಯಾಗಿ ಬಳಸುವ ಮಾತು.
  4. (ಸಾಮಾನ್ಯವಾಗಿ ವಿಶೇಷಣವಾಗಿ ಪ್ರಯೋಗ) ಪುಂಡ:
    1. ಹಿಂಡಿನಿಂದ ಓಡಿಸಲ್ಪಟ್ಟು ಒಂಟಿಯಾಗಿರುವ ಮತ್ತು ಉಗ್ರಕೋಪದ ಕಾಡುಪ್ರಾಣಿ: rogue buffalo ಪುಂಡೆಮ್ಮೆ. rogue elephant ಪುಂಡಾನೆ; ಒಂಟಿ ಸಲಗ.
    2. ಬೇಜವಾಬ್ದಾರಿಯ ಯಾ ಶಿಸ್ತಿಗೊಳಪಡದ ಒಂಟಿ ವ್ಯಕ್ತಿ ಯಾ ವಸ್ತು: rogue trader (ಶಿಸ್ತಿಗೊಳಪಡದ) ಪುಂಡು ವ್ಯಾಪಾರಿ. rogue state (ರಾಷ್ಟ್ರಗಳ ಪರಸ್ಪರ ಸಾಮಾನ್ಯ ನಿಯಮಗಳನ್ನು ಪಾಲಿಸದ) ಪುಂಡುರಾಷ್ಟ್ರ.
  5. ಮೈಗಳ್ಳ ಜೂಜುಕುದುರೆ ಯಾ ಬೇಟೆಕುದುರೆ.
  6. (ಒಪ್ಪಬಹುದಾದ ಅನೇಕ ಮಾದರಿಗಳ ನಡುವೆ) ಕಳಪೆಯಾದದ್ದು ಯಾ ದೋಷಗಳಿಂದ ಕೂಡಿದ್ದು.
  7. (ಮೊಳೆತ ಸಸ್ಯಗಳಲ್ಲಿ, ಸರಿಯಾಗಿ ಮೊಳೆತಿಲ್ಲದ) ಕಳಪೆ ಸಸ್ಯ.
See also 1rogue
2rogue ರೋಗ್‍
ಸಕರ್ಮಕ ಕ್ರಿಯಾಪದ
  1. ಕಳಪೆಯಾದವುಗಳನ್ನು ಯಾ ದೋಷಪೂರಿತವಾದವುಗಳನ್ನು ತೆಗೆದು ಹಾಕು.
  2. ಮೋಸಮಾಡು; ವಂಚಿಸು.