rogation ರೋಗೇಷನ್‍
ನಾಮವಾಚಕ
  1. (ಕ್ರೈಸ್ತಧರ್ಮ) (ಸಾಮಾನ್ಯವಾಗಿ ಬಹುವಚನದಲ್ಲಿ ಪ್ರಯೋಗ) ಯೇಸುಕ್ರಿಸ್ತನ ಸ್ವರ್ಗಾರೋಹಣೋತ್ಸವ ದಿನದ ಹಿಂದಿನ ಮೂರುದಿನಗಳಲ್ಲಿ ಪಠಿಸುವ ಸಂತರ ಪ್ರಾರ್ಥನಾವಳಿ; ಪವಿತ್ರಯಾಚನೆ.
  2. (ರೋಮನ್‍ ಪ್ರಾಕ್ತನಶಾಸ್ತ್ರ) ಕಾನ್ಸಲ್‍ ಯಾ ಪ್ರಜೆಗಳ ಒಪ್ಪಿಗೆಗಾಗಿ ಅವರ ಮುಂದಿಟ್ಟ ಕಾಯಿದೆ, ಕಾನೂನು, ಶಾಸನ: Licinian rogations ಲಿಸಿನಿಯಸ್‍ ಎಂಬಾತನು ಸೂಚಿಸಿದ ಶಾಸನ.
ಪದಗುಚ್ಛ
  1. Rogation Days (ಯೇಸುಕ್ರಿಸ್ತನ ಸ್ವರ್ಗಾರೋಹಣೋತ್ಸವದ ದಿನದ ಹಿಂದಿನ) ಪವಿತ್ರ ಗಂಭೀರ ಯಾಚನೆಯ ಯಾ ಪ್ರಾರ್ಥನಾವಳಿ ಪಠನದ ಮೂರು ದಿನಗಳು.
  2. rogation flower (ಹಿಂದಿನ ಕಾಲದಲ್ಲಿ ಹಾರಗಳನ್ನು ಮಾಡಿ) ರೋಗೇಷನ್‍ ದಿನಗಳಲ್ಲಿ ಮೆರವಣಿಗೆಗಳಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಕುರುಚಲು ಯಾ ಗೋಮಾಳದ ಸಸ್ಯ.
  3. Rogation Sunday ರೊಗೇಷನ್‍ ಭಾನುವಾರ; (ಯೇಸುಕ್ರಿಸ್ತನ ಸ್ವರ್ಗಾರೋಹಣೋತ್ಸವದ ದಿನದ ಹಿಂದಿನ) ಪ್ರಾರ್ಥನಾವಳಿ ಪಠನದ ಯಾ ಪವಿತ್ರ ಯಾಚನೆಯ ಮೂರು ದಿನಗಳ ಹಿಂದಿನ ಭಾನುವಾರ.
  4. rogation week ರೋಗೇಷನ್‍ ಯಾಚನೆಯ ಯಾ ಪ್ರಾರ್ಥನಾವಳಿ ಪಠನದ ವಾರ; (ಯೇಸುಕ್ರಿಸ್ತನ ಸ್ವರ್ಗಾರೋಹಣೋತ್ಸವದ ದಿನದ ಹಿಂದಿನ) ಪ್ರಾರ್ಥನಾವಳಿ ಪಠನದ ಯಾ ದಿವ್ಯಯಾಚನೆಯ ಮೂರು ದಿನಗಳುಳ್ಳ ವಾರ.