rodeo ರೋಡಿಓ, ರಡೇಓ (ಬಹುವಚನ rodeos)
ನಾಮವಾಚಕ
    1. (ಪಶ್ಚಿಮ ಅಮೆರಿಕದ ದೊಡ್ಡ ದನಗಾವಲುಗಳಲ್ಲಿ) ಬರೆಹಾಕಿ ಗುರುತುಮಾಡುವುದು ಮೊದಲಾದವುಕ್ಕಾಗಿ ದನಗಳನ್ನು ಮಂದೆಗೂಡಿಸುವುದು.
    2. ಹೀಗೆ ದನಗಳನ್ನು ಮಂದೆಗೂಡಿಸುವ ಆವರಣ, ಸ್ಥಳ.
  1. (ಮಂದೆಗೂಡಿಸುವುದು, ಪಳಗಿಸಿಲ್ಲದ ಕುದುರೆಗಳ ಸವಾರಿ ಮೊದಲಾದವಲ್ಲಿ) ಗೋವಳರ ಚಾತುರ್ಯ ಪ್ರದರ್ಶನ; ಗೋವಳಿಕೆ ಪ್ರದರ್ಶನ.
  2. (ಮೋಟಾರು ಸೈಕಲ್‍ ಸವಾರಿ ಮೊದಲಾದವುಗಳಲ್ಲಿ ತೋರುವ) ಕೌಶಲ, ಸಾಹಸ ಮೊದಲಾದವುಗಳ ಪ್ರದರ್ಶನ.