rod ರಾಡ್‍
ನಾಮವಾಚಕ
  1. (ಮರದಮೇಲೆ ಬೆಳೆಯುತ್ತಿರುವ ಯಾ ಮರದಿಂದ ಕಡಿದುಹಾಕಿದ) ನೇರ, ದುಂಡು ಮತ್ತು ತೆಳು – ರೆಂಬೆ, ದೊಣ್ಣೆ, ದಂಡ.
  2. (ಚೆಡಿಏಟು ಕೊಡಲು ಬಳಸುವ) ಕೋಲು; ಕಡ್ಡಿ; ಚೆಡಿ; ದಂಡ; ಬೆತ್ತ.
  3. (the rod) ಚೆಡಿ ಏಟು; ದಂಡದ, ಕೋಲಿನ-ಬಳಕೆ.
  4. = fishing-rod.
  5. ಮೀನುಗಾಳ ಹಾಕುವವನು.
  6. ಕೋಲು; ಕಡ್ಡಿ; ದಂಡ:
    1. ಮರದಲ್ಲಿ ಬೆಳೆಯುವ, ತೆಳುವಾಗಿಯೂ ನೆಟ್ಟಗೂ ಗುಂಡಗೂ ಇರುವ ಕಡ್ಡಿ.
    2. ಅದನ್ನು ಕತ್ತರಿಸಿದಾಗ ಆದ ಕಡ್ಡಿ.
  7. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) = hot rod.
  8. (ಮುಖ್ಯವಾಗಿ ಭೂಮಿ ಅಳೆಯುವ) ಒಂದು ಉದ್ದದ ಅಳತೆ ($= 5\frac { 1} { 2}$ ಗಜ).
  9. ಲೋಹದ ಸರಳು; ತೆಳ್ಳನೆಯ ಕಂಬಿ.
  10. ಜೋಡಿಸುವ ಕಂಬಿ: curtain rod ಪರದೆ ಕಂಬಿ.
  11. ಚಾಲಕದಂಡ: piston rod ಆಡುಬೆಣೆಯ ದಂಡ, ಸರಳು.
  12. (ಅಂಗರಚನಾಶಾಸ್ತ್ರ) ಕಣ್ಣಿನ ಪಾಪೆಯ ದಂಡ; ಮಂದ ಬೆಳಕನ್ನು ಪತ್ತೆಮಾಡುವ, ಕಣ್ಣಿನ ಪಾಪೆಯಲ್ಲಿನ ದಂಡದಾಕಾರದ ರಚನೆಗಳಲ್ಲಿ ಒಂದು.
  13. (ಮುಖ್ಯವಾಗಿ ಮರದ ಯಾ ಲೋಹದ)
    1. ನೇರವಾದ ತೆಳು ಕಡ್ಡಿ ಯಾ ದಂಡ.
    2. ಅಧಿಕಾರದ ಲಾಂಛನವಾಗಿ ಈ ದಂಡ.
  14. (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಪಿಸ್ತೂಲು; ರಿವಾಲ್ವರು.
ಪದಗುಚ್ಛ
  1. have a rod in pickle for ಕಾಲ ಬಂದಾಗ ಶಿಕ್ಷಿಸುವುದಕ್ಕೆ ಸಿದ್ಧವಾಗಿರು.
  2. kiss the rod ದಂಡನೆಯನ್ನು ಬಾಯಿಮುಚ್ಚಿಕೊಂಡು ಅನುಭವಿಸು, ಒಪ್ಪಿಕೊ; ಶಿಕ್ಷೆಯನ್ನು ಗೊಣಗುಟ್ಟದೆ ಯಾ ಸಂತೋಷವಾಗಿ ಅನುಭವಿಸು.
  3. make a rod for one’s own back ಮುಂದೆ ತಾನಾಗಿ ತೊಂದರೆ, ಕೇಡು ತಂದುಕೊ.
  4. spare the rod and spoil the child ಬೆತ್ತ ಬಿಟ್ಟಿತು ಮಗು ಕೆಟ್ಟಿತು; ಶಿಕ್ಷೆಮಾಡದೆ ಮುದ್ದಿಸಿ ಮಗುವನ್ನು ಹಾಳುಮಾಡು, ಕೆಡಿಸು.
  5. the rod ಚೆಡಿ ಏಟು.