robot ರೋಬಾಟ್‍
ನಾಮವಾಚಕ
  1. ರೋಬಾಟ್‍:
    1. ಯಂತ್ರಮಾನವ; ಬುದ್ದಿಶಕ್ತಿ ಮತ್ತು ವಿಧೇಯತೆಯಿಂದ ಮನುಷ್ಯನಂತೆ ಕೆಲಸಗಳನ್ನು ಮಾಡುವ, ಮನುಷ್ಯನನ್ನು ಹೋಲುವ, ಯಂತ್ರ; ಸ್ವಯಂಚಾಲಿತವಾಗಿ ಸಂಕೀರ್ಣವಾದ ಕೆಲಸಗಳ ಸರಮಾಲೆಯನ್ನು ನಡೆಸುವ ಸಾಮರ್ಥ್ಯವುಳ್ಳ ಯಂತ್ರ.
    2. (ರೂಪಕವಾಗಿ) ಮಾನವಯಂತ್ರ; ಯಾಂತ್ರಿಕ ಮನುಷ್ಯ; ಯಂತ್ರಸದೃಶ ಮನುಷ್ಯ; ಯಾಂತ್ರಿಕವಾಗಿ ಮತ್ತು ದಕ್ಷವಾಗಿ ಆದರೆ ಸಂವೇದನಾರಹಿತವಾಗಿ ಕೆಲಸ ಮಾಡುವ ವ್ಯಕ್ತಿ.
  2. (ದಕ್ಷಿಣ ಆಹ್ರಿಕ) ಸ್ವಯಂಚಾಲಿತ ವಾಹನಸಂಚಾರ ಸಂಜ್ಞೆ.