See also 2robe
1robe ರೋಬ್‍
ನಾಮವಾಚಕ
  1. ನೀಳುಡುಪು; ನಿಲುವಂಗಿ: ಉದ್ದನೆಯ ಸಡಿಲವಾಗಿ ಮೇಲಂಗಿ (ರೂಪಕವಾಗಿ ಸಹ): the cottage wore a robe of jasmine ಗುಡಿಸಿಲು ಮಲ್ಲಿಗೆಯ ನೀಳುಡುಪನ್ನು ಧರಿಸಿತ್ತು; ಗುಡಿಸಿಲಿನ ಸುತ್ತಲೂ ಮಲ್ಲಿಗೆ ಆವರಿಸಿತ್ತು.
  2. ಮಗುವಿನ ಮೇಲುಜುಬ್ಬ; ಮುಖ್ಯವಾಗಿ ನಾಮಕರಣದ ಸಮಯದಲ್ಲಿ ಮಗುವಿಗೆ ತೊಡಿಸುವ ಉದ್ದನೆಯ ಮೇಲಂಗಿ.
  3. (ಅನೇಕವೇಳೆ ಬಹುವಚನದಲ್ಲಿ) (ಪದವಿ, ಅಧಿಕಾರ, ಉದ್ಯೋಗ ಮೊದಲಾದವುಗಳ ಚಿಹ್ನೆಯಾಗಿ ತೊಡುವ) ಗೌನು; ಉಡುಪು; ಉದ್ದವಾದ ಮೇಲುಡುಪು: the long robe ನ್ಯಾಯವಾದಿಯ ಯಾ ಪಾದ್ರಿಯ ಉಡುಪು.
  4. (ಅಮೆರಿಕನ್‍ ಪ್ರಯೋಗ) = dressing-gown.
  5. (ಅಮೆರಿಕನ್‍ ಪ್ರಯೋಗ) ತುಪ್ಪುಳಿನ ಕಂಬಳಿ.
ಪದಗುಚ್ಛ

gentlemen of the robe ನ್ಯಾಯವಾದಿಗಳು; ವಕೀಲರು.

See also 1robe
2robe ರೋಬ್‍
ಸಕರ್ಮಕ ಕ್ರಿಯಾಪದ

(ವ್ಯಕ್ತಿಗೆ) ನೀಳುಡುಪು – ತೊಡಿಸು, ಹಾಕು.

ಅಕರ್ಮಕ ಕ್ರಿಯಾಪದ

ನೀಳುಡುಪು – ತೊಡು, ಹಾಕಿಕೊ, ಧರಿಸು.