See also 2roaring
1roaring ರೋರಿಂಗ್‍
ನಾಮವಾಚಕ
  1. ಆರ್ಭಟ; ಗರ್ಜನೆ; ಅಬ್ಬರ; ಮೊಳಗು.
  2. (ಕುದುರೆಯ ವಿಷಯದಲ್ಲಿ) ರೋಗದ ಕಾರಣದಿಂದ ಗುರುಗುಟ್ಟುವ ಉಸಿರಾಟ.
See also 1roaring
2roaring ರೋರಿಂಗ್‍
ಗುಣವಾಚಕ
  1. ಗದ್ದಲದ; ಅಬ್ಬರದ; ಅಟ್ಟಹಾಸದ; ಕೋಲಾಹಲದ.
  2. ಗರ್ಜಿಸುವ; ಮೊಳಗುವ; ಮೊರೆಯುವ.
ಪದಗುಚ್ಛ
  1. a roaring blade (ಪ್ರಾಚೀನ ಪ್ರಯೋಗ) ಸ್ವೇಚ್ಛಾಭೋಗಿ; ಸ್ವೈರಿ; ದುರ್ವ್ಯಯ ದುರ್ವ್ಯಸನಗಳಿಗೆ ತುತ್ತಾದವನು.
  2. a roaring night
    1. ಬಿರುಗಾಳಿ ಮಳೆ ಭೋರ್ಗರೆವ ರಾತ್ರಿ.
    2. ಆಮೋದ ಪ್ರಮೋದಗಳಲ್ಲಿ ಕಳೆದ ರಾತ್ರಿ.
  3. drive a roaring trade ಭರಾಟೆಯ, ಜೋರಾದ – ವ್ಯಾಪಾರ ನಡಸು.
  4. in roaring health ಭರ್ಜರಿ ಆರೋಗ್ಯದಲ್ಲಿ.
  5. roaring drunk ಕುಡಿದು ಕೂಗಾಡುತ್ತಿರುವ; ಕಂಠಪೂರ್ತಿ ಕುಡಿದು ಗಲಾಟೆ ಮಾಡುತ್ತಿರುವ.
  6. roaring forties = forty ( ಪದಗುಚ್ಛ$೨$).
  7. roaring twenties ಅಬ್ಬರದ, ಭರಾಟೆಯ ಇಪ್ಪತ್ತರ ದಶಕ; ಮೊದಲನೆಯ ಮಹಾಯುದ್ಧದ ತರುವಾಯ ಆದ ಪುನಶ್ಚೈತನ್ಯ.
  8. the roaring game ‘ಕರ್ಲಿಂಗ್‍’ ಆಟ; ಸ್ಕಾಟ್‍ಲೆಂಡಿನಲ್ಲಿ ದೊಡ್ಡ ದುಂಡು ಕಲ್ಲುಗಳಿಂದ ನೀರ್ಗಲ್ಲಿನ ಮೇಲೆ ಆಡುವ ಒಂದು ಆಟ.