roadblock ರೋಡ್‍ಬ್ಲಾಕ್‍
ನಾಮವಾಚಕ
  1. ರಸ್ತೆ ತಡೆ:
    1. ಸುರಕ್ಷತೆಯ ನಿಯಮಗಳ ಉಲ್ಲಂಘನೆ ಮೊದಲಾದವುಗಳ ತನಿಖೆ ಹಾಗೂ ಯಾವುದಾದರೂ ಅಟ್ಟಿಸಿಕೊಂಡು ಹೋಗುತ್ತಿರುವ ವಾಹನವನ್ನು ತಡೆಗಟ್ಟಲು ರಸ್ತೆಗೆ ಅಡ್ಡವಾಗಿ ಇಡುವ ತಡೆಗಟ್ಟು (ಮುಖ್ಯವಾಗಿ ಪೀಪಾಯಿ, ಕಲ್ಲುಗುಂಡು ಮೊದಲಾದವುಗಳ ಯಾ ಪೊಲೀಸು ವಾಹನಗಳ ಅಡ್ಡಗಟ್ಟು).
    2. ಬಿದ್ದ ಮರ ಯಾ ಕಲ್ಲುರಾಶಿಯಂಥ ರಸ್ತೆ ತಡೆಗಟ್ಟು.
    3. ಶತ್ರು ಮುಂದೆ ಬರುವುದನ್ನು ತಡೆಗಟ್ಟಲು ಅವಸರದಿಂದ ರಸ್ತೆಯ ಅಡ್ಡವಾಗಿ ಕಟ್ಟಿದ ಅಡ್ಡಗಟ್ಟು.
  2. ಅಡಚಣೆ; ಅಡ್ಡಿ; ಪ್ರತಿಬಂಧಕ; ಒಂದು ಧ್ಯೇಯ ಸಾಧನೆಗೆ ಅಡ್ಡ ಬರುವ ಕಾರ್ಯ, ಪರಿಸ್ಥಿತಿ ಮೊದಲಾದವು: nationlism is roadblock to world unity ರಾಷ್ಟ್ರೀಯತೆ ಪ್ರಪಂಚದ ಒಗ್ಗಟ್ಟಿನ ಸಾಧನೆಗೆ ಒಂದು ಅಡಚಣೆ.