rive ರೈವ್‍
ಸಕರ್ಮಕ ಕ್ರಿಯಾಪದ
(ಭೂತರೂಪ rived; ಭೂತಕೃದಂತ riven ಉಚ್ಚಾರಣೆ ರಿವನ್‍).

(ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ)

  1. ಸೀಳು; ಹರಿ; ಬಗಿದು ಹಾಕು; ಸಿಗಿದು ಹಾಕು.
    1. (ಕಟ್ಟಿಗೆ, ಕಲ್ಲು) ಸೀಳು; ಒಡೆ.
    2. ಸೀಳಿ ದಬ್ಬೆಮಾಡು; ಚಕ್ಕೆ ಮಾಡು.
ಅಕರ್ಮಕ ಕ್ರಿಯಾಪದ

ಸೀಳಾಗು:

  1. (ಏಟು ಮೊದಲಾದವನ್ನು ಕೊಟ್ಟಾಗ) ಸೀಳು ಬಿಡು; ಬಿರುಕು ಬಿಡು.
  2. (ಮರ ಮೊದಲಾದವುಗಳ ವಿಷಯದಲ್ಲಿ) ಸೀಳಾಗು; ಸೀಳಾಗಿ ಒಡೆ(ದು ಹೋಗು).