rite ರೈಟ್‍
ನಾಮವಾಚಕ
  1. ಮತಾಚರಣೆ; ಧಾರ್ಮಿಕವಿಧಿ; ಸಂಸ್ಕಾರ; ಕರ್ಮ: the rites of hospitality ಅತಿಥಿ ಸತ್ಕಾರದ ಆಚರಣೆಗಳು.
  2. ಈ ಕರ್ಮದ ಆಚರಣೆ ಯಾ ಪ್ರಕ್ರಿಯೆ.
  3. (ಕ್ರೈಸ್ತವರ್ಗದ ಯಾ ಅದರ ಒಂದು ಭಾಗದ) ರೂಢಿಯಾಗಿ ಮಾಡುವ, ಸಾಂಪ್ರದಾಯಿಕ ಕರ್ಮಾಚರಣಗಳು.
ಪದಗುಚ್ಛ
  1. burial or funeral rites ಉತ್ತರ ಕ್ರಿಯೆಗಳು; ಅಂತ್ಯ ಸಂಸ್ಕಾರಗಳು.
  2. conjugal (or nuptial) rites ಋತುಶಾಂತಿ; ನಿಷೇಕಪ್ರಸ್ತ.
  3. rite of passage (ಅನೇಕ ವೇಳೆ ಬಹುವಚನದಲ್ಲಿ ಪ್ರಯೋಗ) ನೈಮಿತ್ತಿಕ ಕರ್ಮ; ಜೀವನದಲ್ಲಿ ಒಂದು ಘಟ್ಟದಿಂದ ಮುಂದುವರಿದಾಗ, ಮುಖ್ಯವಾಗಿ ಮದುವೆಯಾದಾಗ, ಮಾಡುವ ಕರ್ಮಾಚರಣೆ.
  4. the Latin, Anglican rite ಲ್ಯಾಟಿನ್‍, ಆಂಗ್ಲಿಕನ್‍ ಚರ್ಚಿನ ಮತಕ್ರಿಯೆಗಳು, ಧರ್ಮಾನುಷ್ಠಾನಗಳು ಯಾ ಅವುಗಳ ಪದ್ಧತಿ.
  5. the rites of confirmation(ಕ್ರೈಸ್ತಧರ್ಮ) ಜ್ಞಾನಸ್ನಾನವಾದವರಿಗೆ ಕೊಡುವ ಸ್ಥಿರೀಕರಣ ಸಂಸ್ಕಾರಗಳು.