ripe ರೈಪ್‍
ಗುಣವಾಚಕ
  1. (ಪಯಿರಿನ ವಿಷಯದಲ್ಲಿ) ಕೊಯ್ಲಿಗೆ, ಕಟಾವಿಗೆ ಸಿದ್ಧವಾದ (ಸ್ಥಿತಿಯಲ್ಲಿರುವ): ripe corn ಕೊಯ್ಲಿಗೆ ಸಿದ್ಧವಾ ಪಯಿರು.
  2. (ಹಣ್ಣಿನ ವಿಷಯದಲ್ಲಿ) ಕಳಿತ; ಮಾಗಿದ; ಹಣ್ಣಾದ; ಪಕ್ವವಾದ; ತಿನ್ನಲು ಸರಿಯಾದ: ripe fruit ಮಾಗಿದ ಹಣ್ಣು.
  3. ಹದವಾದ: ripe wine ಹದವಾದ ಮದ್ಯ.
  4. ಬಲಿತ; ಪಕ್ವವಾದ; ಪೂರ್ಣವಾಗಿ ಬೆಳೆದ: ripe in judgement ತೀರ್ಮಾನ ತೆಗೆದುಕೊಳ್ಳುವಷ್ಟು ಪಕ್ವವಾದ.
  5. (ವ್ಯಕ್ತಿಯ ಆಯುಸ್ಸಿನ ವಿಷಯದಲ್ಲಿ) ಹಣ್ಣಾದ; ವಯಸ್ಸಾದ; ಮುಪ್ಪಾದ.
  6. ಪಕ್ವ(ವಾದ); ಹದವಾದ ಯಾ ಸಿದ್ಧವಾದ: when the time is ripe ಕಾಲ ಪಕ್ವವಾದಾಗ. land ripe for cultivation ವ್ಯವಸಾಯಕ್ಕೆ ಸಿದ್ಧವಾಗಿರುವ ಭೂಮಿ.
  7. (ಮುಖದ ಸಹಜವರ್ಣ ಮೊದಲಾದವು) ಹಣ್ಣುಗೆಂಪಿನ; ಮಾಗಿದ ಹಣ್ಣಿನಂತೆ ತುಂಬಿಕೊಂಡು ಕೆಂಪಗಿರುವ.
ಪದಗುಚ್ಛ
  1. die at a ripe age ಮುಪ್ಪಿನಲ್ಲಿ ಸಾಯಿ; ವೃದ್ಧಾಪ್ಯದಲ್ಲಿ, ತುಂಬು ವಯಸ್ಸಿನಲ್ಲಿ, ಹಣ್ಣು ವಯಸ್ಸಿನಲ್ಲಿ–ಮರಣ ಹೊಂದು.
  2. disease ripe for treatment ಚಿಕಿತ್ಸೆಗೆ ಹದವಾಗಿರುವ ಕಾಯಿಲೆ.
  3. is ripe to hear the truth ಸತ್ಯವನ್ನು ಕೇಳುವಷ್ಟು ಪಕ್ವವಾಗಿರುವವನು, ಬೆಳೆದಿದ್ದಾನೆ.
  4. mood or person ripe for mischief ಕೀಟಲೆಗೆ ತಯಾರಾಗಿರುವ ಮನಃಸ್ಥಿತಿ ಯಾ ಸಿದ್ಧವಾಗಿರುವ ವ್ಯಕ್ತಿ.
  5. opportunity ripe to be seized ಉಪಯೋಗಿಸಿಕೊಳ್ಳಲು ಹದವಾಗಿರುವ ಅವಕಾಶ.
  6. person of ripe years ಪರಿಣತ ವಯಸ್ಕ; ವಯೋವೃದ್ಧ; ಮುದುಕ.
  7. plan ripe for execution ಕಾರ್ಯಗತ ಮಾಡಲು ಸಿದ್ಧವಾಗಿರುವ ಯೋಜನೆ.
  8. ripe lips (ಮಾಗಿದ ಹಣ್ಣಿನಂತೆ) ತುಂಬಿದ ಕೆಂದುಟಿಗಳು.
  9. ripe scholar ಪರಿಪಕ್ವ ವಿದ್ವಾಂಸ.
  10. ripe scholarship ಪರಿಪಕ್ವವಿದ್ವತ್ತು; ಪಕ್ವವಾದ ಪಾಂಡಿತ್ಯ.
  11. ripe judgement ಪಕ್ವವಿವೇಚನಾ ಶಕ್ತಿ.
  12. ripe experience ತುಂಬಿದ ಅನುಭವ; ಪರಿಪಕ್ವವಾದ ಅನುಭವ.
  13. ripe understanding ಪರಿಪಕ್ವವಾದ ತಿಳಿವಳಿಕೆ.
  14. soon ripe soon rotten (ಗಾದೆ) ಕಳಿಯುವುದೂ ಬೇಗ, ಕೊಳೆಯುವುದೂ ಬೇಗ (ಅಕಾಲದ ಪ್ರೌಢತೆ ಒಳ್ಳೆಯದಲ್ಲವೆಂದು ಹೇಳುವಾಗ).