riotous ರೈಅಟಸ್‍
ಗುಣವಾಚಕ
  1. (ಕೃತ್ಯಕ ವಿಷಯದಲ್ಲಿ) ಶಾಂತಿಭಂಗ ಮಾಡುವ; ದಂಗೆಯೆಬ್ಬಿಸುವ; ಗುಲ್ಲೆಬ್ಬಿಸುವ; ದೊಂಬಿಹುಟ್ಟಿಸುವ.
  2. (ವ್ಯಕ್ತಿ)
    1. ದೊಂಬಿಮಾಡಲು, ದಂಗೆಯೇಳಲು ಪ್ರಚೋದಿಸುವ.
    2. ದೊಂಬಿಕೋರ; ದೊಂಬಿಯಲ್ಲಿ, ದಂಗೆಯಲ್ಲಿ ಭಾಗವಹಿಸುವ.
  3. ಸ್ವೇಚ್ಛಾಚಾರಕ್ಕೆ ಬಿದ್ದ; ವಿಷಯಲಂಪಟತನಕ್ಕೆ ತುತ್ತಾದ; ಭೋಗವಿಲಾಸಕ್ಕೆ ಮನಸೋತ; ಭೋಗಾತಿರೇಕಕ್ಕೆ ಪಕ್ಕಾದ.
  4. ಕೋಲಾಹಲದಿಂದ ಕೂಡಿದ; ಅತಿಸಂಭ್ರಮದ; ಬಹಳ ಗಲಾಟೆಯ; ಅಬ್ಬರದ: riotous laughter ಅಬ್ಬರದ ನಗೆ.
  5. (ಸಸ್ಯದ ವಿಷಯದಲ್ಲಿ) ಹುಚ್ಚಾಬಟ್ಟೆ ಬೆಳೆದ, ಹರಡಿದ; ಹೊರೆಯಾಗಿ, ಬಹಳ ಹುಲುಸಾಗಿ–ಬೆಳೆದ.