See also 2riot
1riot ರೈಅಟ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ನೀತಿಗೆಟ್ಟ ಬಾಳು; ಸ್ವೇಚ್ಛಾಜೀವನ; ಹದ್ದುಬಸ್ತಿಲ್ಲದ ಜೀವನ; ವಿಷಯಲಂಪಟತನ.
  2. ಗಲಾಟೆಯ ಸಂಭ್ರಮ; ಭಾರಿ ಮೋಜು; ವಿಪರೀತ ಸಂಭ್ರಮ.
  3. ಆಮೋದ ಪ್ರಮೋದ; ಭಾರಿ ಮಜಾ.
  4. ಅತಿ(ರೇಕ) ಭೋಗ; ಸ್ವೇಚ್ಛಾಭೋಗ; ಭೋಗವಿಲಾಸ; ಸಂಯಮರಹಿತ ಲೋಲುಪತೆ.
  5. ಭಾರಿ ಪ್ರದರ್ಶನ; ವಿಜೃಂಭಣೆ: a riot of emotion, colour, sound ರಾಗಗಳ, ಬಣ್ಣಗಳ, ನಾದಗಳ ವಿಜೃಂಭಣೆ.
  6. (ಬೇಟೆ) ಬೇಟೆನಾಯಿ ವಿವೇಚನೆಯಿಲ್ಲದೆ ಸಿಕ್ಕಿದ ವಾಸನೆಯನ್ನು ಹಿಡಿದು ಹೋಗುವುದು, ನುಗ್ಗುವುದು.
  7. (ಜನಸಂದಣಿ ಸೇರಿದಾಗ ಆಗುವ) ಗೊಂದಲ; ಕೋಲಾಹಲ; ತುಮುಲ; ದೊಂಬಿ; ಗಲಿಬಿಲಿ; ದಂಗೆ; ಶಾಂತಿಭಂಗ; ಗಲಭೆ; ಕ್ಷೋಭೆ: the army had to be called to put down the riot ದಂಗೆಯನ್ನು ಅಡಗಿಸಲು ಸೈನ್ಯವನ್ನು ಕರೆಸಬೇಕಾಯಿತು.
  8. (ಆಡುಮಾತು) ತುಂಬ ಮೋಜು, ಮನರಂಜನೆ ಒದಗಿಸುವ ವಸ್ತು ಯಾ ವ್ಯಕ್ತಿ: she is an absolute riot! ಅವಳು ಭರ್ಜರಿ ಮೋಜಿನ ವ್ಯಕ್ತಿ!
ಪದಗುಚ್ಛ
  1. (ರೂಪಕವಾಗಿ) (ಸಾಮಾನ್ಯವಾಗಿ ಮನುಷ್ಯ, ಅವನ ನಾಲಗೆ ಯಾ ಕಲ್ಪನೆಯ ವಿಷಯದಲ್ಲಿ) ನಿರಂಕುಶವಾಗಿ ವರ್ತಿಸು; ಅಡತಡೆಯಿಲ್ಲದೆ, ಹದ್ದುಬಸ್ತಿಲ್ಲದೆ–ವರ್ತಿಸು; ಮನಸ್ವೀವರ್ತಿಸು; ಸ್ವೇಚ್ಛೆಯಾಗಿ ನಡೆದುಕೊ.
  2. (ಸಸ್ಯಗಳ ವಿಷಯದಲ್ಲಿ) ಎಗ್ಗುಸಗ್ಗಿಲ್ಲದೆ, ಸಿಕ್ಕಾಬಟ್ಟೆ–ಬೆಳೆ ಯಾ ಹರಡು.
See also 1riot
2riot ರೈಅಟ್‍
ಅಕರ್ಮಕ ಕ್ರಿಯಾಪದ
  1. ಸ್ವೇಚ್ಛಾಜೀವನ ನಡಸು; ಭೋಗಜೀವನ ನಡಸು; ಭೊಗವಿಲಾಸದಲ್ಲಿ ತೊಡಗು.
  2. ದೊಂಬಿ ನಡಸು ಯಾ ದೊಂಬಿಯಲ್ಲಿ ಭಾಗವಹಿಸು.