ringer ರಿಂಗರ್‍
ನಾಮವಾಚಕ
  1. (ಕ್ವಾಯ್ಟ್ಸ್‍ ಎಂಬ ಆಟದಲ್ಲಿ)
    1. (ಗೂಟದ ಸುತ್ತ ಬೀಳುವ) ಬಳೆ.
    2. ಇಂಥ ಬಳೆಯೆಸೆತ.
  2. ಬೇಟೆಗೆ ಸಿಕ್ಕಿಕೊಂಡಾಗ ಸುತ್ತ ಓಡುವ ನರಿ.
  3. ಗಂಟೆ ಬಾರಿಸುವವನು; ಗಂಟೆ ಹೊಡೆಯುವವನು.
  4. ಗಂಟೆ ಬಾರಿಸುವ ಸಲಕರಣೆ.
  5. (ಮುಖ್ಯವಾಗಿ ಅಮೆರಿಕನ್‍ ಪ್ರಯೋಗ) ಮೋಸದ ವಿಧಾನದಿಂದ, ಮುಖ್ಯವಾಗಿ ಬದಲಿಯಾಗಿ, ಸ್ಪರ್ಧೆಗೆ ಇಳಿದ ಕ್ರೀಡಾಪಟು ಯಾ ಕುದುರೆ.
  6. ಮೋಸದ ವೇಷಧಾರಿ; ಮೋಸಮಾಡಲು ಇನ್ನೊಬ್ಬನಂತೆ ವೇಷಹಾಕಿದವನು.
  7. (ಆಸ್ಟ್ರೇಲಿಯ)
    1. ಬೇಗ, ತ್ವರಿತವಾಗಿ ರೊಪ್ಪದಲ್ಲಿ ಕುರಿಗಳ ಉಣ್ಣೆ ಕತ್ತರಿಸುವವ.
    2. ಗೊಲ್ಲ; ಜಾನುವಾರುಗಳನ್ನು ನೋಡಿಕೊಳ್ಳುವವ.
ಪದಗುಚ್ಛ

be a ringer (or dead ringer) for (ಒಬ್ಬ ವ್ಯಕ್ತಿಯನ್ನು) ಯಥಾವತ್ತಾಗಿ, ತದ್ವತ್ತಾಗಿ ತದ್ರೂಪಾಗಿ–ಹೋಲು.