rigour ರಿಗರ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ rigor)

  1. ಕಡುಪು; ಉಗ್ರತೆ; ಪುರುಷತೆ; ಕಾಠಿಣ್ಯ; ಕಠುತ್ವ; ತೀವ್ರತೆ; ನಿಷ್ಠುರತೆ; ನಿರ್ದಾಕ್ಷಿಣ್ಯ; ನಿರ್ದಯ: the moral rigour which prohibits simple pleasures of life ಜೀವನದ ಸರಳ ಸಂತೋಷಗಳನ್ನು ನಿಷೇಧಿಸುವ ನೈತಿಕ ನಿಷ್ಠುರತೆ.
  2. (ಬಹುವಚನದಲ್ಲಿ) ಉಗ್ರ (ಕಾರ್ಯ)ಕ್ರಮಗಳು; ನಿರ್ದಯ ಕಾಯಿದೆಗಳು.
  3. ನಿಷ್ಠುರ ನೇಮ, ನಿಯಮ ಪಾಲನೆ; ಅತಿ ಕಟ್ಟುನಿಟ್ಟು: the utmost rigour of the law ಕಾನೂನಿನ ಅತ್ಯಂತ ನಿಷ್ಠುರಪಾಲನೆ.
  4. (ಹವೆ, ಕ್ಷಾಮ, ಕಷ್ಟ ಮೊದಲಾದವುಗಳ) ಬಿರುಸು; ತೀವ್ರತೆ, ಉಗ್ರತೆ; ಕಠೋರತೆ.
  5. (ವ್ರತ ನಿಯಮಾದಿಗಳ) ಅತಿನೇಮ; ಕಡುನಿಷ್ಠೆ; ಅನುಷ್ಠಾನದ ಯಾ ಸಿದ್ಧಾಂತದ ಅತಿ ಕಟ್ಟುನಿಟ್ಟು.
  6. ತರ್ಕಬದ್ಧವಾದ ನಿಷ್ಕೃಷ್ಟತೆ; ಯಥಾರ್ಥತೆ; ನಿಖರತೆ; ನಿರಕು: the logical rigour of mathematics ಗಣಿತಶಾಸ್ತ್ರದ ತರ್ಕಬದ್ಧವಾದ ನಿಷ್ಕೃಷ್ಟತೆ.