rigger ರಿಗರ್‍
ನಾಮವಾಚಕ
  1. ನೌಕಾ ಹವಣಿಗ; ಹಡಗಿಗೆ ಕೂವೆಮರ, ಅಡ್ಡದಿಮ್ಮಿ, ಹಗ್ಗ ಮೊದಲಾದವನ್ನು ಹವಣಿಸುವವನು.
  2. ನೌಕಾಸಜ್ಜುಗಾರ; ಹಡಗನ್ನು ಪ್ರಯಾಣಕ್ಕೆ ಸಿದ್ಧಪಡಿಸುವವನು, ಸಜ್ಜುಗೊಳಿಸುವವನು.
  3. ಮೋಸಗಾರ; ವಂಚಕ; ತಂತ್ರಿ:
    1. (ಬಂಡವಾಳ ಪತ್ರ ವ್ಯಾಪಾರ ಕಟ್ಟೆಯಲ್ಲಿ, ಹರಾಜು ಮೊದಲಾದವುಗಳಲ್ಲಿ) ಮೋಸದಿಂದ, ವಂಚನೆಯಿಂದ ವ್ಯವಹರಿಸುವವನು.
    2. ಹೀಗೆ ವಂಚನೆ ಮಾಡಲು ಏರ್ಪಾಟು ಮಾಡುವವ.
  4. (ವಿಮಾನದ) ಭಾಗಗಳನ್ನು ಜೋಡಿಸುವವನು; ಸರಿಹೊಂದಿಸುವವನು.
  5. ಎಣ್ಣೆಬಾವಿ ಯಂತ್ರದ ಕೆಲಸ ಮಾಡುವವನು.
  6. = outrigger(5).
    1. ಬಟ್ಟಲು ಚಳಕದಾಟಗಾರ.
    2. ಮೋಸಗಾರ; ವಂಚಕ; ಠಕ್ಕ.
  7. ಒಂದು ನಿರ್ದಿಷ್ಟವಾದ ರೀತಿಯಲ್ಲಿ ಹಗ್ಗ ಮತ್ತು ಕೂವೆಮರಗಳು ಅಳವಟ್ಟಿರುವ ಹಡಗು.
  8. (ಕಟ್ಟಡಗಳನ್ನು ಕಟ್ಟುವಾಗ ಅಕ್ಕಪಕ್ಕದಲ್ಲಿ ಓಡಾಡುವ ಜನರ ಮೇಲೆ ಬೀಳದಂತೆ ನೋಡಿಕೊಳ್ಳಲು ಕಟ್ಟುವ) ಸಾರುವೆ; ಕಾಲಾವದಿ.