rider ರೈಡರ್‍
ನಾಮವಾಚಕ
  1. ಸವಾರ; (ಮುಖ್ಯವಾಗಿ ಕುದುರೆ ಯಾ ಇತರ ಪ್ರಾಣಿ ಯಾ ವಾಹನವನ್ನು) ಸವಾರಿ ಮಾಡುವವನು.
  2. (ನೌಕಾಯಾನ) (ಬಹುವಚನದಲ್ಲಿ) ಹಡಗಿನ ಬಿಗಿಪಟ್ಟಿಗಳು; ಹಡಗಿನ ಮೈಕಟ್ಟನ್ನು ಭದ್ರಪಡಿಸುವ ಹೆಚ್ಚಿಗೆಯ ಮರದ ದಿಮ್ಮಿಗಳು ಯಾ ಕಬ್ಬಿಣದ ಪಟ್ಟಿಗಳು.
  3. (ನೌಕಾಯಾನ) (ಏಕವಚನ) ಒಂದರಮೇಲೊಂದು ಕೂತಿರುವ ಹಗ್ಗ; ಕೂಡುಹಗ್ಗ; ಹಗ್ಗದ ತಿರಿಚು.
  4. ಏಟುಕಲ್ಲು; ಹೊಡೆಗಲ್ಲು; (ದೊಡ್ಡ ದುಂಡು ಕಲ್ಲುಗಳಿಂದ ನೀರ್ಗಲ್ಲಿನ ಮೇಲೆ ಆಡುವ ‘ಕರ್ಲಿಂಗ್‍’ ಎಂಬ ಆಟದಲ್ಲಿ) ಮತ್ತೊಂದು ಕಲ್ಲನ್ನು ಏಟುಕೊಟ್ಟು ಉರುಳಿಸುವ ಕಲ್ಲು.
    1. (ದಸ್ತಾವೇಜಿಗೆ ತಿದ್ದುಪಡಿ ಮಾಡುವ ಯಾ ಸೇರಿಸುವ) ಅಧಿಷರತ್ತು; ಹೆಚ್ಚಿನ ಷರತ್ತು; ಉಪವಿಧಿ.
    2. (ಬ್ರಿಟಿಷ್‍ ಪ್ರಯೋಗ) (ಶಾಸನಸಭೆಯು ಮಸೂದೆ ಮೊದಲಾದವುಗಳಿಗೆ ತಿದ್ದುಪಡಿ ಮಾಡುವ ಯಾ ಸೇರಿಸುವ) ಹೆಚ್ಚಿಗೆಯ ಷರತ್ತು; ಉಪನಿಯಮ; ಉಪವಿಧಿ.
    3. (ಬ್ರಿಟಿಷ್‍ ಪ್ರಯೋಗ) ಅನುಬಂಧ; ತೀರ್ಪಿನ ಜತೆಗೆ ಸೇರಿಸಿ ಕೊಟ್ಟ ಅಭಿಪ್ರಾಯ, ಮಾಡಿದ ಶಿಫಾರಸು ಮೊದಲಾದವು.
  5. (ಯಾವುದೇ ಸಿದ್ಧಾಂತವನ್ನು ಅನುಸರಿಸಿ ಒದಗುವ) ಉಪಸಿದ್ಧಾಂತ; ಅನುಸಿದ್ಧಾಂತ.
  6. (ಗಣಿತ) (ಜ್ಯಾಮಿತಿ) ಅಭ್ಯಾಸ; ಪ್ರಮೇಯವೊಂದರ ಆಧಾರದ ಎಲೆ ನಿಗಮನ ವಿಧಾನದಿಂದ ಪಡೆಯಬಹುದಾದ ಫಲಿತಾಂಶ.