rid ರಿಡ್‍
ಸಕರ್ಮಕ ಕ್ರಿಯಾಪದ
[ಭೂತರೂಪ ಮತ್ತು ಭೂತಕೃದಂತ rid; (ಪ್ರಾಚೀನ ಪ್ರಯೋಗ ridded); ವರ್ತಮಾನ ಕೃದಂತ ridding].
  1. (ವ್ಯಕ್ತಿಯನ್ನು)
    1. (.. ಇಂದ) ತಪ್ಪಿಸು; ಬಿಡಿಸು; ಬಿಡುಗಡೆ ಮಾಡು; ಪಾರುಮಾಡು.
    2. (ಸ್ಥಳದಿಂದ) ತೊಲಗಿಸು; (ಸಾಮಾನ್ಯವಾಗಿ ಭೂತಕೃದಂತದಲ್ಲಿ be ಯಾ get ಒಡನೆ ಪ್ರಯೋಗ): glad to be rid of him ಅವನು ತೊಲಗಿಹೋಗಿದ್ದು ಸಂತೋಷ.
  2. (ಕಸವನ್ನೂ ಅಡಚಣೆಗಳನ್ನೂ) ತೆಗೆದುಹಾಕು; ತೆಗೆದು ದಾರಿಮಾಡು.
  3. (ಪ್ರಾಚೀನ ಪ್ರಯೋಗ) (ಪೀಡೆಯನ್ನು) ಕಳೆ; ತೊಡೆದುಹಾಕು; ನಿರ್ಮೂಲಮಾಡು; ತೊಲಗಿಸಿಬಿಡು.
ಪದಗುಚ್ಛ