See also 2ricochet
1ricochet ರಿಕಷೇ, ರಿಕಷೆಟ್‍
ನಾಮವಾಚಕ
  1. (ನೀರಿನ ಮೇಲಾಗಲಿ ನೆಲದ ಮೇಲಾಗಲಿ, ಕ್ಷಿಪಣಿಯ, ಮುಖ್ಯವಾಗಿ ಫಿರಂಗಿಯ ಯಾ ಬಂದೂಕಿನ ಗುಂಡು) ಕುಪ್ಪಳಿಸುತ್ತ, ಪುಟವೇಳುತ್ತಾ ಯಾ ಜಿಗಿಯುತ್ತಾ ಹೋಗುವುದು; (ಗುಂಡಿನ) ಕುಪ್ಪಳಿಕೆ, ಜಿಗಿತ.
  2. (ನೆಲದ ಮೇಲೆ ಯಾ ನೀರಿನ ಮೇಲೆ) ಹಾಗೆ ಕುಪ್ಪಳಿಸುತ್ತ ಹೋಗಿ ಹೊಡೆದ ಗುಂಡಿನೇಟು; ಕುಪ್ಪಳೇಟು (ಅನೇಕ ವೇಳೆ ವಿಶೇಷಣವಾಗಿ ಪ್ರಯೋಗ).
See also 1ricochet
2ricochet ರಿಕಷೇ, ರಿಕಷೆಟ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ ricocheted ಉಚ್ಚಾರಣೆ ರಿಕಷೇಡ್‍,
ಸಕರ್ಮಕ ಕ್ರಿಯಾಪದ

(ಬಂದೂಕು, ಹಿರಂಗಿ, ಗೋಲಂದಾಜಿನವನು ಮೊದಲಾದವರ ವಿಷಯದಲ್ಲಿ) ಕುಪ್ಪಳೇಟು(ಗಳಿಂದ) ಹೊಡೆ; ಕುಪ್ಪಳೇಟು(ಗಳು) ಬೀಳುವಂತೆ ಗುರಿಯಿಡು.

ಅಕರ್ಮಕ ಕ್ರಿಯಾಪದ

(ಗುಂಡು ಮೊದಲಾದವುಗಳ ವಿಷಯದಲ್ಲಿ) (ಒಮ್ಮೆ ಯಾ ಹೆಚ್ಚು ಸಲ) ತಗುಲಿ ಚಿಮ್ಮು; ಕುಪ್ಪಳಿಸು; ಪುಟವೇಳು.