rickety ರಿಕಿಟಿ
ಗುಣವಾಚಕ
    1. ಕುಟಿಲವಾತದಿಂದ, ರಿಕೆಟ್ಸ್‍ನಿಂದ ನರಳುವ; ಕುಟಿಲವಾತದ; ಮೆತುಮೂಳೆರೋಗದ.
    2. ರಿಕೆಟ್ಸ್‍ ರೋಗವನ್ನು ಹೋಲುವ.
  1. (ವ್ಯಕ್ತಿಗಳ ಯಾ ವಸ್ತುಗಳ, ಮುಖ್ಯವಾಗಿ ಪೀಠೋಪಕರಣಗಳ ವಿಷಯದಲ್ಲಿ) ಅಳ್ಳಾಡುವ; ಕೀಲುಗಳೆಲ್ಲ ಸಡಲಿಹೋದ; ಶಿಥಿಲ; ದಾರ್ಢ್ಯವಿಲ್ಲದ; ಭದ್ರವಿಲ್ಲದ; ನಲುಗಿದ.
  2. (ಕಟ್ಟಡ ವಿಷಯದಲ್ಲಿ) ಅಲ್ಲಾಡುವ ಯಾ ಅಭದ್ರವಾದ.