See also 2rich
1rich ರಿಚ್‍
ಗುಣವಾಚಕ
  1. (ವ್ಯಕ್ತಿ, ಸಮಾಜ, ದೇಶ ಮೊದಲಾದವುಗಳ ವಿಷಯದಲ್ಲಿ) ಸಿರಿವಂತ; ಶ್ರೀಮಂತ; ಐಶ್ವರ್ಯಯುಕ್ತ; ಧನಿಕ; ಹಣವಂತ.
  2. (ದೇಶ, ಕಾಲ, ಭೂಗುಣ ಮೊದಲಾದವುಗಳ ವಿಷಯದಲ್ಲಿ)
    1. ನೈಸರ್ಗಿಕ ಸಂಪತ್ತಿನಿಂದ ತುಂಬಿದ; ಪ್ರಕೃತಿ ಸಂಪದ್ಭರಿತ.
    2. ಅಧಿಕೋತ್ಪಾದಕ; ಹೆಚ್ಚು ಪ್ರಮಾಣದಲ್ಲಿ ಉತ್ಪಾದಿಸುವ ಶಕ್ತಿಯುಳ್ಳ.
  3. ಫಲಸಮೃದ್ಧವಾದ; ಫಲವತ್ತಾದ: rich with vines ದ್ರಾಕ್ಷಿ ಬೆಳೆಯಿಂದ ಸಮೃದ್ಧವಾದ.
  4. ಬೆಲೆಬಾಳುವ; ಅಮೂಲ್ಯ: rich offerings ಬೆಲೆಬಾಳುವ ಕಾಣಿಕೆಗಳು.
  5. (ಉಡುಪು, ಪೀಠೋಪಕರಣ, ಕಟ್ಟಡ, ಔತಣದ ಊಟ ಮೊದಲಾದವುಗಳ ವಿಷಯದಲ್ಲಿ) ವೈಭವಯುಕ್ತವಾದ; ಶೋಭಾಯಮಾನವಾದ; ಬಹುಬೆಲೆಯ; ಭರ್ಜರಿಯಾದ.
  6. (ಆಹಾರದ ವಿಷಯದಲ್ಲಿ) ಪುಷ್ಟಿಕರ ಮತ್ತು ರುಚಿಕರ; ಸ್ವಾದಿಷ್ಟ; ಹೆಚ್ಚು ಪ್ರಮಾಣದಲ್ಲಿ ಜಿಡ್ಡು, ಎಣ್ಣೆ, ಬೆಣ್ಣೆ, ಮೊಟ್ಟೆ, ಸಕ್ಕರೆ, ಮಸಾಲೆ, ಮೊದಲಾದವುಗಳುಳ್ಳ: rich in nutrients ಪೋಷಕಾಂಶಗಳಿಂದ ತುಂಬಿದ.
  7. (ಬಣ್ಣ, ನಾದ, ವಾಸನೆ) ಪೂರ್ಣವೂ ಸ್ವಚ್ಛವೂ ಆದ; ಸ್ನಿಗ್ಧ; ಗಾಢವಾದ; ದಟ್ಟವಾದ; ತುಂಬಿದ.
  8. ಯಥೇಷ್ಟ; ಸಮೃದ್ಧ; ಪುಷ್ಕಲ; ವಿಪುಲ; ಹೇರಳ; ಹುಲುಸಾದ: rich harvest ಹುಲುಸಾದ ಫಸಲು.
    1. (ಘಟನೆಗಳ ವಿಷಯದಲ್ಲಿ) ಮನೋರಂಜಕ; ತುಂಬ ವಿನೋದಕರವಾದ; ಹಾಸ್ಯಭರಿತ: a rich first act ಬಹಳ ವಿನೋದದಿಂದ ಕೂಡಿದ ಮೊದಲನೆಯ ಅಂಕ.
    2. (ಹಾಸ್ಯದ ವಿಷಯದಲ್ಲಿ) ಒರಟಾದ; ಅಸಭ್ಯ.
  9. ಇಂಧನಭರಿತ; (ಅಂತರ್ದಹನ ಎಂಜಿನ್‍ನಲ್ಲಿಯ ಮಿಶ್ರಣದ ವಿಷಯದಲ್ಲಿ) ಇಂಧನದ ಪ್ರಮಾಣ ಹೆಚ್ಚಾಗಿರುವ.
See also 1rich
2rich ರಿಚ್‍
ನಾಮವಾಚಕ

ಧನಿಕ; ಹಣವಂತ; ಶ್ರೀಮಂತ.

ಪದಗುಚ್ಛ
  1. rich and poor ಧನಿಕರೂ ದರಿದ್ರರೂ; ಸಿರಿವಂತರೂ ಬಡವರೂ.
  2. the rich ಧನಿಕರು; ಶ್ರೀಮಂತರು; ಐಶ್ವರ್ಯವಂತರು.