See also 2rhyme
1rhyme ರೈಮ್‍
ನಾಮವಾಚಕ
  1. (ಮುಖ್ಯವಾಗಿ ಪದ್ಯದಲ್ಲಿ) (ಅಂತ್ಯ)ಪ್ರಾಸ(ಉದಾಹರಣೆಗೆ greet ಮತ್ತು deceit shepherd ಮತ್ತು leopard).
  2. (ಏಕವಚನ ಯಾ ಬಹುವಚನದಲ್ಲಿ)
    1. ಪ್ರಾಸವಿರುವ ಪದ್ಯಪಂಕ್ತಿ; ಪ್ರಾಸವುಳ್ಳ ಪಾದ: should be written in rhyme ಪ್ರಾಸದಿಂದ ಕೂಡಿದ ಪಾದಗಳಲ್ಲಿ ಬರೆಯಬೇಕು.
    2. ಪ್ರಾಸಬದ್ಧ ಪದ್ಯ, ಕವಿತೆ: am sending you some rhymes ನಿನಗೆ ಕೆಲವು ಪ್ರಾಸಪ್ರಯೋಗಗಳನ್ನು ಕಳುಹಿಸುತ್ತಿದ್ದೇನೆ. was reading an old rhyme ಹಳೆಯ ಪ್ರಾಸಕವಿತೆಯನ್ನು ಓದುತ್ತಿದ್ದೆ.
    3. ಪ್ರಾಸಪ್ರಯೋಗ: I prefer blank verse to rhyme ಪ್ರಾಸ ಪ್ರಯೋಗಕ್ಕಿಂತ ಸರಳರಗಳೆಯನ್ನು ಹೆಚ್ಚು ಇಷ್ಟಪಡುತ್ತೇನೆ.
  3. ಪ್ರಾಸಪದ; ಪ್ರಾಸಶಬ್ದ; (ಮತ್ತೊಂದರೊಡನೆ) ಪ್ರಾಸವಾಗುವ, ಪ್ರಾಸಕೂಡುವ ಪದ: can’t find a rhyme to teacups ಟೀಕಪ್ಸ್‍ ಎಂಬ ಪದಕ್ಕೆ ಪ್ರಾಸಕೂಡುವ ಶಬ್ದ ನನಗೆ ದೊರೆತಿಲ್ಲ.
ಪದಗುಚ್ಛ
  1. double rhyme ದ್ವಿಪ್ರಾಸ; ಎರಡು ಉಚ್ಚಾರಾಂಶಗಳ ಪ್ರಾಸ (ಉದಾಹರಣೆಗೆ motion, notion).
  2. female (or feminine) rhyme (ಎರಡು ಅಕ್ಷರಗಳಲ್ಲಿ, ಎರಡನೆಯದಕ್ಕೆ ಸ್ವರಭಾರವಿಲ್ಲದ) ಸ್ತ್ರೀಪ್ರಾಸ.
  3. imperfect rhyme ಅಪೂರ್ಣ ಪ್ರಾಸ; ಊನಪ್ರಾಸ (ಉದಾಹರಣೆಗೆ love/move, phase/race).
  4. male (or masculine) rhyme = 1rhyme(2a).
  5. nursery rhyme ಮಕ್ಕಳ ಹಾಡು; ಶಿಶುಗೀತೆ.
  6. neither rhyme nor reason = ಪದಗುಚ್ಛ \((7)\).
  7. without rhyme or reason ಕಾರಣ ಹೂರಣ ಒಂದೂ ಇಲ್ಲದ; ತರ್ಕಪರ್ಕವಿಲ್ಲದ; ಶುದ್ಧ ಅವಿವೇಕವಾದ.
See also 1rhyme
2rhyme ರೈಮ್‍
ಸಕರ್ಮಕ ಕ್ರಿಯಾಪದ
  1. (ಕಥೆ ಮೊದಲಾದವುಗಳನ್ನು) ಪದ್ಯಕ್ಕೆ ತಿರುಗಿಸು; ಪ್ರಾಸದಲ್ಲಿ ಬರೆ; ಪ್ರಾಸಾತ್ಮಕವಾಗಿ ಮಾಡು.
  2. (ಕಾಲವನ್ನು) ಪ್ರಾಸಕಟ್ಟುವುದರಲ್ಲಿ ಕಳೆದುಬಿಡು; ಕವನ ರಚನೆಯಲ್ಲಿ ಕಾಲಹರಣ ಮಾಡು.
  3. (ವ್ಯಕ್ತಿ) ಪದವನ್ನು ಪ್ರಾಸವಾಗಿ ಬಳಸು; ಪ್ರಾಸವನ್ನು ಹೊಸೆ.
ಅಕರ್ಮಕ ಕ್ರಿಯಾಪದ
  1. ಪದ್ಯ ಬರೆ; ಕವಿತೆ ರಚಿಸು.
  2. (ಪದಗಳು, ಪಂಕ್ತಿಗಳು) ಪ್ರಾಸವನ್ನೊಳಗೊಂಡಿರು; ಪ್ರಾಸಯುಕ್ತವಾಗಿರು.
  3. (ಪದ) ಪ್ರಾಸವೊದಗಿಸು; ಪ್ರಾಸಗೂಡು; ಪ್ರಾಸವಾಗು.
  4. ಪ್ರಾಸಗಳನ್ನು ಬಳಸು: rhymes carelessly ಎಚ್ಚರಿಕೆಯಿಲ್ಲದೆ, ಉದಾಸೀನದಿಂದ ಪ್ರಾಸಗಳನ್ನು ಬಳಸುತ್ತಾನೆ.