rhubarb ರೂಬಾರ್ಬ್‍
ನಾಮವಾಚಕ
  1. ರೂಬಾರ್ಬ್‍:
    1. ಚೀನಾ ಮತ್ತು ಟಿಬೆಟ್ಟುಗಳ ಒಂದು ಬಗೆಯ ಸಸ್ಯದ ಬೇರು; ರೇವಲ್ಚಿನ್ನಿ; ರೇವಾಚಿನ್ನಿ.
    2. ವಿರೇಚಕ; ಈ ಬೇರಿನಿಂದ ಮಾಡಿದ ಭೇದಿಯೌಷಧ: Chinese rhubarb ಚೀನಾ ರೇವಲ್ಚಿನ್ನಿ; ಚೀನಾದಿಂದ ಆಮದು ಮಾಡಿಕೊಂಡ ರೇವಲ್ಚಿನ್ನಿ ಯಾ ವಿರೇಚಕ.
    3. (ವಸಂತಋತುವಿನಲ್ಲಿ ಹಣ್ಣಿಗೆ ಬದಲು ಬೇಯಿಸಿ ತಿನ್ನುವ) ಒಂದು ಬಗೆಯ ತೋಟದ ಸಸ್ಯ.
    4. ಈ ಸಸ್ಯದ ಮೆತು ತಿರುಳಿನ ಎಲೆದಂಟು: English, French, common, or garden rhubarb (ವಿರಳ ಪ್ರಯೋಗ) ಇಂಗ್ಲೆಂಡಿನ, ಹ್ರಾನಿನ, ಸಾಧಾರಣ ಯಾ ತೋಟದ ಎಲೆದಂಟು.
  2. (ಅಮೆರಿಕನ್‍ ಪ್ರಯೋಗ, ಅಶಿಷ್ಟ) ಜಗಳ; ಕಚ್ಚಾಟ.
  3. (ಆಡುಮಾತು) ಪಿಸುಗುಟ್ಟುವ ಸಂಭಾಷಣೆ ಯಾ ಶಬ್ದ (ಮುಖ್ಯವಾಗಿ ಜನಸಂದಣಿಯನ್ನು ಅಭಿನಯಿಸುವ ನಟರ ತಂಡ ಮತ್ತೆ ಮತ್ತೆ ಉಚ್ಚರಿಸುವ ‘ರೂಬಾರ್ಬ್‍’ ಎಂಬ ಪದ).
  4. (ಅಮೆರಿಕನ್‍ ಪ್ರಯೋಗ) (ಅಶಿಷ್ಟ) ಅಬದ್ಧ; ಕೆಲಸಕ್ಕೆ ಬಾರದ್ದು; ನಿಷ್ಪ್ರಯೋಜಕವಾದದ್ದು.