rhetoric ರೆಟರಿಕ್‍
ನಾಮವಾಚಕ
    1. ವಾಗ್ಮಿತಾಕಲೆ; ಭಾಷಣಕಲೆ; ಮನವೊಲಿಯುವಂತೆ ಯಾ ಪರಿಣಾಮಕಾರಿಯಾಗಿ ಭಾಷಣಮಾಡುವ ಯಾ ಬರೆಯುವ ಕಲೆ.
    2. ಅಲಂಕಾರಶಾಸ್ತ್ರ; ಭಾಷಣಶಾಸ್ತ್ರ; ವಾಗ್ಮಿತಾಕಲೆಯನ್ನು ಕುರಿತ ನಿಬಂಧ, ಶಾಸ್ತ್ರ.
  1. ಮನಸ್ಸನ್ನು ಒಲಿಸಿಕೊಳ್ಳುವಂತೆ ಯಾ ಪರಿಣಾಮ ಬೀರುವಂತೆ ರಚಿತವಾದ (ಅನೇಕವೇಳೆ ಕೃತಕತೆ, ಅಪ್ರಾಮಾಣಿಕತೆ ಮೊದಲಾದವುಗಳಿಂದ ಕೂಡಿದ್ದು ಎಂಬ ಸೂಚನೆಯುಳ್ಳ) ಭಾಷೆ, ಶೈಲಿ.
  2. (ಮುಖಭಾವದ ಯಾ ಕ್ರಿಯೆಗಳ) ಆಕರ್ಷಕತೆ, ಮನವೊಲಿಸಿಕೊಳ್ಳುವ ಗುಣ: silent rhetoric of persuading eyes ಮನವೊಲಿಸುವ ಮೌನ ಆಕರ್ಷಣೆ.