See also 2rewrite
1rewrite ರೀರೈಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ rewrote; ಭೂತಕೃದಂತ rewritten).
  1. ಪುನಃ, ಮತ್ತೆ–ಬರೆ.
  2. ಬೇರೆ ರೀತಿಯಲ್ಲಿ ಬರೆ; ಬದಲಾಯಿಸಿ ಬರೆ; ಪರಿಷ್ಕರಿಸಿ ಬರೆ.
  3. (ಅಮೆರಿಕನ್‍ ಪ್ರಯೋಗ) (ವರದಿಗಾರ ಮೊದಲಾದವರು ಕಳುಹಿಸಿದ ಸುದ್ದಿ ಮೊದಲಾದವನ್ನು) ಪತ್ರಿಕೆಯಲ್ಲಿ ಪ್ರಕಟವಾಗಬಹುದಾದ ರೀತಿಯಲ್ಲಿ ಬರೆ; ಪ್ರಕಟಣಾರ್ಹವಾಗಿ ಬರೆ; ಅಚ್ಚಾಗಲು ಯೋಗ್ಯವಾಗುವಂತೆ ನಿರೂಪಿಸು.
See also 1rewrite
2rewrite ರೀರೈಟ್‍
ನಾಮವಾಚಕ
  1. ಪುನರ್ಲೇಖನ:
    1. ಮತ್ತೆ ಬರೆಯುವುದು.
    2. ಮತ್ತೆ ಬರೆದದ್ದು.
  2. ಪರಿಷ್ಕೃತ ಲೇಖನ; ಬದಲಾಯಿಸಿ ಬೇರೆ ರೀತಿಯಲ್ಲಿ ತಿದ್ದಿ–ಬರೆದದ್ದು.
  3. ಪ್ರಕಟಣಾರ್ಹ ಲೇಖನ; ಅಚ್ಚು ಯೋಗ್ಯ ಬರೆಹ.