revulsion ರಿವಲ್ಷನ್‍
ನಾಮವಾಚಕ
  1. (ವೈದ್ಯಶಾಸ್ತ್ರ) ಪ್ರತ್ಯುದ್ರೇಕ (ಚಿಕಿತ್ಸೆ); ದೇಹದಲ್ಲಿನ ಒಂದು ಅಂಗದ ವ್ಯಾಧಿಗೆ ಮತ್ತೊಂದು ಅಂಗವನ್ನು ಉದ್ರೇಕಿಸುವ ಮೂಲಕ ಚಿಕಿತ್ಸೆ ಮಾಡುವುದು.
  2. (ವಿರಳ ಪ್ರಯೋಗ) ಅಪಕರ್ಷಣ; ಹಿಂದಕ್ಕೆ ತೆಗೆದುಕೊಂಡು ಬಿಡುವುದು: the revulsion of capital from other trades ಇತರ ವ್ಯಾಪಾರೋದ್ಯಮಗಳಿಂದ ಬಂಡವಾಳವನ್ನು ಹಿಂದಕ್ಕೆ ತೆಗೆದುಕೊಂಡು ಬಿಡುವುದು.
  3. (ಭಾವ, ಅಭಿರುಚಿ ಮೊದಲಾದವುಗಳಲ್ಲಿ) ಥಟ್ಟನೆ ಉಂಟಾದ ತೀವ್ರ ಬದಲಾವಣೆ, ಪೂರ್ಣ ಪರಿವರ್ತನೆ: there was a revulsion of public feeling in favour of the accused woman ಅಪರಾಧಿ ಹೆಂಗಸಿನ ಪರವಾಗಿ ಸಾರ್ವಜನಿಕರ ಭಾವನೆ ಥಟ್ಟನೆ ಪೂರ್ತಿ ಬದಲಾಯಿತು.
  4. (ವ್ಯಾಪಾರ, ಅಷ್ಟ ಮೊದಲಾದವುಗಳಲ್ಲಿ) ವಿರುದ್ಧ–ಸ್ಥಿತಿ, ಪ್ರತ್ತಿ, ವ್ಯತ್ಯಾಸ, ಬದಲಾವಣೆ.
  5. ಜುಗುಪ್ಸೆ; ಅಸಹ್ಯ; ದ್ವೇಷ; ಹೇವರಿಕೆ.