revolve ರಿವಾಲ್ವ್‍
ಸಕರ್ಮಕ ಕ್ರಿಯಾಪದ
  1. (ಅಕ್ಷದ ಮೇಲೆ) ಸುತ್ತು ತಿರುಗಿಸು; ಸುತ್ತ ಸುತ್ತಿಸು: machine for revolving the turntable ತಿರುಗುಪೀಠವನ್ನು, ತಿರುಗು ಜಗುಲಿಯನ್ನು ಸುತ್ತಿಸಲು ಬಳಸುವ ಯಂತ್ರ.
  2. ತ್ತಪಥದಲ್ಲಿ ಹೋಗುವಂತೆ ಮಾಡು.
  3. (ಸಮಸ್ಯೆ, ಸಂಗತಿ ಮೊದಲಾದವನ್ನು) ಮನಸ್ಸಿನಲ್ಲಿ–ತಿರುವಿಹಾಕು, ಆವರ್ತಿಸು, ಚಿಂತಿಸು, ಪರ್ಯಾಲೋಚಿಸು, ವಿಚಾರಮಾಡು.
ಅಕರ್ಮಕ ಕ್ರಿಯಾಪದ
  1. (ಅಕ್ಷದ ಮೇಲೆ) ಪರಿಭ್ರಮಿಸು; ಸುತ್ತು ತಿರುಗು: earth revolves on its axis ಭೂಮಿ ತನ್ನ ಅಕ್ಷದ ಮೇಲೆ ಸುತ್ತು ತಿರುಗುತ್ತದೆ.
  2. ಪರಿಭ್ರಮಿಸು; ತ್ತಾಕಾರದ ಪಥದಲ್ಲಿ–ಹೋಗು, ಸಾಗು, ಚಲಿಸು: earth revolves round (or about) the sun ಭೂಮಿ ಸೂರ್ಯನ ಸುತ್ತಲೂ ಪರಿಭ್ರಮಿಸುತ್ತದೆ.
  3. ಆವರ್ತಿಸು; ಸುತ್ತಿ, ಮರಳಿ–ಬರು; ಪುನರಾವರ್ತನೆಯಾಗು: seasons revolve ಋತುಗಳು ಪುನರಾವರ್ತಿಸುತ್ತವೆ.