revolutionize ರೆವಲೂಷನೈಸ್‍
ಸಕರ್ಮಕ ಕ್ರಿಯಾಪದ
  1. ಕ್ರಾಂತಿಕಾರಕ ಬದಲಾವಣೆ–ಮಾಡು, ತರು; ಆಮೂಲಾಗ್ರವಾಗಿ ಬದಲಾಯಿಸು; ಪೂರ್ತಿಯಾಗಿ, ಸಂಪೂರ್ಣವಾಗಿ–ವ್ಯತ್ಯಾಸಗೊಳಿಸು: the use of atomic energy will revolutionize the lives of future generations ಅಣುಶಕ್ತಿಯ ಬಳಕೆಯು ಭವಿಷ್ಯದ ಪೀಳಿಗೆಗಳ ಬದುಕನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ.
  2. ಕ್ರಾಂತಿಕಾರಕ ಭಾವನೆಗಳಿಂದ, ತತ್ತ್ವಗಳಿಂದ ತುಂಬು.