revolution ರೆವಲೂಷನ್‍
ನಾಮವಾಚಕ
  1. ಪರಿಭ್ರಮಣ; ಆವರ್ತನ; ಸುತ್ತು–ಸುತ್ತುವುದು, ತಿರುಗುವುದು; ಒಂದು ಕಕ್ಷೆಯಲ್ಲಿ, ತ್ತ ಪಥದಲ್ಲಿ, ಅಕ್ಷದ ಯಾ ಕೇಂದ್ರದ ಸುತ್ತ–ಸುತ್ತುವುದು, ತಿರುಗುವುದು: the revolution of the earth round the sun ಸೂರ್ಯನ ಸುತ್ತ ಭೂಮಿಯ ಪರಿಭ್ರಮಣ.
  2. (ಚಕ್ರ ಮೊದಲಾದವುಗಳ) ಒಂದು ಸುತ್ತು; ಆವರ್ತ; ಕಕ್ಷೆಯಲ್ಲಿ ಯಾ ಕೇಂದ್ರದ ಸುತ್ತ ಪೂರ್ತಿಯಾಗಿ ಒಂದು ಸಲ ಸುತ್ತುವುದು: sixty revolutions a minute ಒಂದು ನಿಮಿಷಕ್ಕೆ 60 ಆವರ್ತಗಳು.
  3. ಆವರ್ತಕಾಲ; ಆವರ್ತಾವಧಿ; ಒಂದು ಸಲ ಪೂರ್ತಿಯಾಗಿ ಸುತ್ತುವುದಕ್ಕೆ ತೆಗೆದುಕೊಳ್ಳುವ ಕಾಲ.
  4. (ಘಟನೆಗಳ ಯಾ ಕಾಲಾವಧಿಯ) ಆವರ್ತನೆ; ಪುನರಾವರ್ತನೆ; ಚಕ್ರದ ಸುತ್ತಿನಂತೆ ಮರಳಿ ಮರಳಿ ಬರುವುದು.
  5. ಸಂಪೂರ್ಣ, ಆಮೂಲಾಗ್ರ–ಬದಲಾವಣೆ; ಬುಡಮಟ್ಟ ಮಾರ್ಪಾಟು; ಮೂಲಭೂತ ಬದಲಾವಣೆ; ಸ್ಥಿತಿಗತಿಗಳ, ವ್ಯವಸ್ಥೆಯ ತಲೆಕೆಳಗು ಯಾ ಬುಡಮೇಲು ಮಾಡುವುದು ಯಾ ಆಗುವುದು: revolution on our ideas of time and space ಕಾಲದೇಶಗಳ ವಿಷಯದಲ್ಲಿ ನಮ್ಮ ಭಾವನೆಗಳಲ್ಲಿನ ಆಮೂಲಾಗ್ರ ಬದಲಾವಣೆ. revolution in our ways of travelling (ಮೋಟಾರು ಕಾರು, ವಿಮಾನ ಮೊದಲಾದವುಗಳಿಂದಾಗಿ) ನಮ್ಮ ಪ್ರಯಾಣದ ವಿಧಾನಗಳಲ್ಲಿನ ಸಂಪೂರ್ಣ ಬದಲಾವಣೆಗಳು.
    1. ಕ್ರಾಂತಿ; ವಿಪ್ಲವ; (ಮುಖ್ಯವಾಗಿ) ಪ್ರಜೆಗಳು ದೊರೆಯನ್ನು ಯಾ ರಾಜ್ಯ ಪದ್ಧತಿಯನ್ನು ಬಲಪ್ರಯೋಗದಿಂದ ಕಿತ್ತೊಗೆದು ಹೊಸ ದೊರೆಯನ್ನು ಯಾ ರಾಜ್ಯಪದ್ಧತಿಯನ್ನು ಸ್ಥಾಪಿಸಿಸುವುದು.
    2. (ಮಾರ್ಕ್ಸ್‍ವಾದದಲ್ಲಿ) ಒಂದು ಆಳುವ ವರ್ಗದ ಬದಲು ಇನ್ನೊಂದನ್ನು ತರುವುದು.
    3. (ಮಾರ್ಕ್ಸ್‍ವಾದದಲ್ಲಿ) ರಾಜಕೀಯ ಬದಲಾವಣೆಗಳನ್ನು ತಂದು ಕಮ್ಯೂನಿಸಂಗೆ ಜಯವನ್ನು ಕೊಡುವ ವರ್ಗಸಂಘರ್ಷ.
  6. (ಭೂವಿಜ್ಞಾನ)\ ಪರ್ವತೋತ್ಪತ್ತಿ, ಪರ್ವತ ಜನನ–ಕಾಲ, ಅವಧಿ; ಪ್ರಪಂಚಾದ್ಯಂತ ಬೆಟ್ಟಗಳು ರಚನೆಗೊಳ್ಳುವ ಕಾಲ.
ಪದಗುಚ್ಛ
  1. American Revolution(1775ರಲ್ಲಿ ಇಂಗ್ಲೆಡಿನ ಪ್ರಭುತ್ವವನ್ನು ಕಿತ್ತೊಗೆದ) ಅಮೆರಿಕದ ಕ್ರಾಂತಿ.
  2. French Revolution (1789ರಲ್ಲಿ ರಾಜಪ್ರಭುತ್ವವನ್ನು ತೆಗೆದುಹಾಕಿದ) ಹ್ರಾನ್ಸಿನ ಕ್ರಾಂತಿ; ಹ್ರೆಂಚ್‍ ಕ್ರಾಂತಿ.
  3. Russian Revolution (1917ರಲ್ಲಿ ರಾಜಪ್ರಭುತ್ವವನ್ನು ಅಳಿಸಿಹಾಕಿದ) ರಷ್ಯಾದ ಕ್ರಾಂತಿ; ರಷ್ಯಾಕ್ರಾಂತಿ.
  4. the Revolution 1688ರಲ್ಲಿ ಇಂಗ್ಲೆಂಡಿನ ಎರಡನೆ ಜೇಮ್ಸ್‍ ದೊರೆಯನ್ನು ಓಡಿಸಿದ ಕ್ರಾಂತಿ.