See also 2revoke
1revoke ರಿವೋಕ್‍
ಸಕರ್ಮಕ ಕ್ರಿಯಾಪದ
  1. (ತೀರ್ಪು, ಕಾಯಿದೆ, ಸಮ್ಮತಿ, ವಾಗ್ದಾನ, ಅನುಮತಿ–ಇವನ್ನು) ಹಿಂದಕ್ಕೆ ತೆಗೆದುಕೊ; ರದ್ದುಮಾಡು; ಹೊಡೆದುಹಾಕು; ಅಳಿಸಿಹಾಕು.
  2. (ವಿರಳ ಪ್ರಯೋಗ) (ಪ್ರಾಣಿಯನ್ನು, ಮುಖ್ಯವಾಗಿ ದೇಶಭ್ರಷ್ಟನಾದ ಯಾ ವಿದೇಶದಲ್ಲಿ ಅಧಿಕಾರದಲ್ಲಿರುವ ವ್ಯಕ್ತಿಯನ್ನು) ಹಿಂದಕ್ಕೆ ತರು; ವಾಪಸು ಕರೆ.
ಅಕರ್ಮಕ ಕ್ರಿಯಾಪದ

(ಇಸ್ಪೀಟಾಟದಲ್ಲಿ) ರಂಗುಚೋರಿ ಮಾಡು; ಇಳಿಯಬೇಕಾದ ಎಲೆಯನ್ನು ಇಳಿಯದಿರು; ಆಡಬೇಕಾದ ಆಟ ಆಡದಿರು.

See also 1revoke
2revoke ರಿವೋಕ್‍
ನಾಮವಾಚಕ
  1. (ಇಸ್ಪೀಟಾಟದಲ್ಲಿ) ರಂಗುಚೋರಿ.
  2. (ವಿರಳ ಪ್ರಯೋಗ) ರದ್ದಿಯಾತಿ; ಹಿಂದಕ್ಕೆ ತೆಗೆದುಕೊಳ್ಳುವುದು: beyond revoke ರದ್ದು ಮಾಡಲಾಗದ; ಹಿಂತೆಗೆದುಕೊಳ್ಳಲಾಗದ.
  3. (ವಿರಳ ಪ್ರಯೋಗ) ವಾಪಸಾತಿ.